ಗ್ವಾಲಿಯರ್(ಮಧ್ಯಪ್ರದೇಶ): ಕಟ್ಟಿಕೊಂಡ ಹೆಂಡತಿಯ ಜೊತೆ ಗಂಡನೋರ್ವ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದು, ಮನನೊಂದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಘಟನೆ ನಡೆದಿದೆ. ಗಂಡನ ಕೃತ್ಯದಿಂದ ಮನನೊಂದು ವಿರೋಧಿಸಿದಾಗ ತನಗೆ ಮನಬಂದಂತೆ ಥಳಿಸಿದ್ದಾನೆಂದು ಹೇಳಿಕೊಂಡಿರುವ ಪತ್ನಿ, ಅನೇಕ ಸಲ ಕರೆಂಟ್ ಶಾಕ್ ಸಹ ನೀಡಿದ್ದಾನೆಂದು ಅಳಲು ತೋಡಿಕೊಂಡಿದ್ದಾಳೆ.
ಪತಿಯಿಂದ ಅಸ್ವಾಭಾವಿಕ ಲೈಂಗಿಕ ಕ್ರಿಯೆ; ನೊಂದು ಪೊಲೀಸ್ ಠಾಣೆಗೆ ದೂರು ನೀಡಿದ ಪತ್ನಿ - ಹೆಂಡ್ತಿ ಜೊತೆ ಅಸ್ವಾಭಾವಿಕ ಲೈಂಗಿಕ ಸಂಬಂಧ
ಕಳೆದ ಒಂದು ವರ್ಷದಿಂದಲೂ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದು ವಿರೋಧ ವ್ಯಕ್ತಪಡಿಸಿದಾಗಲೆಲ್ಲ ಹಲ್ಲೆ ನಡೆಸಿದ್ದಾನೆಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
Husband unnatural sex case
ಇದನ್ನೂ ಓದಿ:ದೇವಸ್ಥಾನಕ್ಕೆ ತೆರಳುವಾಗ ಪಿಕಪ್ ವಾಹನ ಪಲ್ಟಿ: ಒಂದೇ ಕುಟುಂಬದ 9 ಮಂದಿ ಸಾವು
ಒಂದು ವರ್ಷದಿಂದ ಕಿರುಕುಳ:ಮೊರೆನಾ ಜಿಲ್ಲೆಯಲ್ಲಿ ವಾಸವಾಗಿರುವ 26 ವರ್ಷದ ಮಹಿಳೆ 2021ರಲ್ಲಿ ಗ್ವಾಲಿಯರ್ನ ಇಕ್ಬಾಲ್ ಜೊತೆ ಮದುವೆ ಮಾಡಿಕೊಂಡಿದ್ದಳು. ಹೊಸದಾಗಿ ಗಂಡನ ಮನೆಗೆ ಬಂದಾಗಿನಿಂದಲೂ ಪತಿ ದೌರ್ಜನ್ಯವೆಸಗುತ್ತಿದ್ದು, ಬಲವಂತವಾಗಿ ತನ್ನೊಂದಿಗೆ ಅಸ್ವಾಭಾವಿಕ ಸಂಬಂಧ ಹೊಂದಲು ಬಯಸುತ್ತಿದ್ದಾನೆಂದು ಹೇಳಿದ್ದಾಳೆ. ಪತ್ನಿ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಇಕ್ಬಾಲ್ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.