ಕರ್ನಾಟಕ

karnataka

ETV Bharat / bharat

ವಿವಾಹ - ವಿಚ್ಛೇದನ - ಮರು ಮದುವೆ: ಕೊನೆಗೂ ಹೆಂಡತಿಯನ್ನ ಕೊಂದು ಪೊಲೀಸ್​ ಠಾಣೆಗೆ ರುಂಡ ತಂದ ಪತಿ - ರಂಗಾರೆಡ್ಡಿಯಲ್ಲಿ ಮರುಮದುವೆಯಾಗಿ ಪತ್ನಿ ಕೊಲೆ

ವಿಚ್ಛೇದನದ ಬಳಿಕವೂ ರಾಜಿಯಾಗಿ ಮರು ಮದುವೆಯಾಗಿದ್ದ ದಾಂಪತ್ಯ ಜೀವನ ಕೊಲೆಯಲ್ಲಿ ಅಂತ್ಯವಾಗಿದೆ. ಹೆಂಡತಿ ಶೀಲ ಶಂಕಿಸಿದ ಪತಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

Husband murdered wife in Telangana
ಹೆಂಡತಿಯನ್ನ ಕೊಂದು ಪೊಲೀಸ್​ ಠಾಣೆಗೆ ರುಂಡ ತಂದ ಪತಿ

By

Published : Dec 10, 2021, 6:38 PM IST

ರಂಗಾರೆಡ್ಡಿ​ (ತೆಲಂಗಾಣ): ಮಲಗಿದ್ದ ಪತ್ನಿಯನ್ನು ಬರ್ಬರವಾಗಿ ಕೊಂದ ಪತಿ, ಆಕೆಯ ತಲೆಯನ್ನು ಹಿಡಿದು ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ದಾರುಣ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಯನ್ನು ಹೈದರಾಬಾದ್​​ನ ಇಮಾದ್‌ ನಗರದಲ್ಲಿ ವಾಸವಾಗಿರುವ ಫರ್ವೇಜ್ ಎಂದು ಗುರುತಿಸಲಾಗಿದೆ. ಈತನನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ವಿವಾಹ - ವಿಚ್ಛೇದನ-ಮರು ಮದುವೆ-ಕೊಲೆ

14 ವರ್ಷಗಳ ಹಿಂದೆ ಸಮ್ರಿನ್ ಎಂಬವರನ್ನು ಫರ್ವೇಜ್ ಮದುವೆಯಾಗಿದ್ದ. ಇವರಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಮಗನಿದ್ದಾರೆ. ಆದರೆ, ಪತ್ನಿಗೆ ಆತ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ. ಹೀಗಾಗಿ ಆಕೆ ಗಂಡನ ವಿರುದ್ಧ ಪ್ರಕರಣ ದಾಖಲಿಸಿ, ವಿಚ್ಛೇದನ ಪಡೆದುಕೊಂಡಿದ್ದಳು. ಕೆಲ ತಿಂಗಳು ಜೈಲಿನಲ್ಲಿದ್ದ ಫರ್ವೇಜ್ ಬಿಡುಗಡೆಯಾದ ಬಳಿಕ ಇವರಿಬ್ಬರಿಗೆ ರಾಜಿ ಮಾಡಿಸಿ, ಮರು ಮದುವೆ ಮಾಡಿಸಲಾಗಿತ್ತು.

ಇದನ್ನೂ ಓದಿ: ಮದುವೆಯಾದ ಎರಡೇ ತಿಂಗಳಿಗೆ 5 ವರ್ಷದ ಬಾಲಕನನ್ನು ಕೊಂದ ಮಲತಾಯಿ

ಮರುಮದುವೆಯಾದ ಬಳಿಕ ಹೆಂಡತಿ ಶೀಲದ ಮೇಲೆ ಫರ್ವೇಜ್ ಅನುಮಾನ ಪಡಲು ಶುರುಮಾಡಿ ದಿನವೂ ಜಗಳ ಮಾಡುತ್ತಿದ್ದನು. ಇಂದು ನಸುಕಿನ ಜಾವ 4 ಗಂಟೆ ವೇಳೆಗೆ ಮನೆಯಲ್ಲಿ ಮಲಗಿದ್ದ ಸಮ್ರಿನ್​ಳನ್ನು ಕತ್ತಿಯಿಂದ ಹಲ್ಲೆ ಮಾಡಿ ಕೊಂದಿದ್ದಾನೆ. ಅಷ್ಟೇ ಅಲ್ಲ, ಆಕೆಯ ತಲೆ ಕತ್ತರಿಸಿ, ಅದನ್ನು ಹಿಡಿದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಕೊಲೆ ಮಾಡುವಾಗ ಈತ ಗಾಂಜಾ ಸೇವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ABOUT THE AUTHOR

...view details