ಕರ್ನಾಟಕ

karnataka

ಗರ್ಭಿಣಿ ಪತ್ನಿ, ಮೂರು ವರ್ಷದ ಮಗನ ಜೀವಂತ ಸುಟ್ಟು ಹಾಕಿದ ಪಾಪಿ ಗಂಡ

ಹೆಂಡತಿ ತವರು ಮನೆಯಿಂದ ಹಣ ತೆಗೆದುಕೊಂಡು ಬರಲಿಲ್ಲವೆಂದು ಮೂರು ವರ್ಷದ ಮಗ ಹಾಗೂ ಪತ್ನಿಯನ್ನು ಮನೆಯಲ್ಲಿ ಕಟ್ಟಿ ಹಾಕಿ ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಬಿಹಾರದ ಸುಪೌಲ್​ನಲ್ಲಿ ನಡೆದಿದೆ.

By

Published : Jan 4, 2022, 7:38 PM IST

Published : Jan 4, 2022, 7:38 PM IST

Husband Murdered His wife and son in Bihar
Husband Murdered His wife and son in Bihar

ಸುಪೌಲ್(ಬಿಹಾರ):ಬಿಹಾರದ ಸುಪೌಲ್​​ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಪಾಪಿ ಗಂಡನೋರ್ವ ಗರ್ಭಿಣಿ ಪತ್ನಿ ಮತ್ತು ಮೂರು ವರ್ಷದ ಮಗನನ್ನು ಜೀವಂತವಾಗಿ ಸುಟ್ಟು ಹಾಕಿದ್ದಾನೆ.

ಪತ್ನಿ ಹಾಗೂ ಮಗುವಿನ ಕಣ್ಣಿಗೆ ಬ್ಯಾಂಡೇಜ್​ ಕಟ್ಟಿ, ಅವರನ್ನು ಹಾಸಿಗೆಗೆ ಬಿಗಿದಿರುವ ಗಂಡ ಬೆಂಕಿ ಹಚ್ಚಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಬೆನ್ನಲ್ಲೇ ಆರೋಪಿ ತನ್ನ ಸಹೋದರಿ ಜೊತೆ ಪರಾರಿಯಾಗಿದ್ದಾನೆ. ಸುಪೌಲ್​ನ ತ್ರಿವೇಣಿಗಂಜ್​​ನ ಮಯೂರ್ವಾ ವಾರ್ಡ್​​ನಲ್ಲಿ ಈ ಪ್ರಕರಣ ನಡೆದಿದೆ.

ಮೃತ ಮಹಿಳೆಯ ಸಂಬಂಧಿಕರು, ಪತಿ ಹಾಗೂ ಆತನ ಸಹೋದರಿ ಸೇರಿ ಈ ದುಷ್ಕೃತ್ಯ ವೆಸಗಿದ್ದಾರೆಂದು ಆರೋಪಿಸಿದ್ದಾರೆ. ಮೃತ ಮಹಿಳೆಯನ್ನು ರಂಜನ್​ ದೇವಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ಬಾಲಿವುಡ್ ನಟಿ ಜಾಕ್ವೆಲಿನ್​ ಫರ್ನಾಂಡಿಸ್‌ ತಾಯಿಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಲಭ್ಯವಾಗಿರುವ ಮಾಹಿತಿ ಪ್ರಕಾರ, ಆರೋಪಿ ಪತಿ ಆಶಿಶ್ ರೈಲ್ವೆ ಇಲಾಖೆಯಲ್ಲಿ ಗ್ರೂಪ್ ಡಿ ಕೆಲಸಕ್ಕೆ ಲಂಚ ಕೊಡಲು ಪತ್ನಿಯಿಂದ 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದನಂತೆ. ಕಳೆದ ಆರು ತಿಂಗಳಿಂದ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ವರದಿಯಾಗಿದೆ.

ABOUT THE AUTHOR

...view details