ಕರ್ನಾಟಕ

karnataka

ETV Bharat / bharat

ಕೊರೊನಾ ಸೋಂಕಿತ ಹೆಂಡತಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಗಂಡ - ಹೆಂಡತಿ ಕೊಲೆ ಮಾಡಿದ ಗಂಡ

ಕೊರೊನಾ ವೈರಸ್​ನಿಂದ ಬಳಲುತ್ತಿದ್ದ ಹೆಂಡತಿ ಕೊಲೆ ಮಾಡಿರುವ ಗಂಡ ತದನಂತರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

Husband murder  wife
Husband murder wife

By

Published : Apr 26, 2021, 5:49 PM IST

ಪಾಟ್ನಾ(ಬಿಹಾರ):ಮಹಾಮಾರಿ ಕೊರೊನಾ ವೈರಸ್ ಹಾವಳಿಯಿಂದ ನಿತ್ಯ ಸಾವಿರಾರು ಜನರು ಸೋಂಕಿಗೊಳಗಾಗುತ್ತಿದ್ದು, ಅನೇಕರು ಆಸ್ಪತ್ರೆಯಲ್ಲಿ ಸಾವು - ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇದರ ಮಧ್ಯೆ ಬಿಹಾರದಲ್ಲೊಂದು ಶಾಕಿಂಗ್​ ನ್ಯೂಸ್ ಹೊರಬಿದ್ದಿದೆ.

ಕಟ್ಟಿಕೊಂಡ ಹೆಂಡತಿ ಕೊರೊನಾ ಪಾಸಿಟಿವ್​ ಎಂಬುದು ದೃಢಗೊಳ್ಳುತ್ತಿದ್ದಂತೆ ಆಕೆಯ ಕೊಲೆ ಮಾಡಿರುವ ವ್ಯಕ್ತಿ ನಂತರ ಆತನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನ ಅತುಲ್​ ಲಾಲ್​ ಎಂದು ಗುರುತಿಸಲಾಗಿದ್ದು, ರೈಲ್ವೆ ಇಲಾಖೆಯಲ್ಲಿ ಈತ ಕಾರ್ಯ ನಿರ್ವಹಿಸುತ್ತಿದ್ದನು. ಈತನ ಹೆಂಡತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಳು.

ಇದನ್ನೂ ಓದಿ: ಕಾಂಗ್ರೆಸ್​ನ ಪೋಸ್ಟರ್ ಮಹಿಳೆಗೆ ಕೊರೊನಾ ಪಾಸಿಟಿವ್

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಅತುಲ್​ ಲಾಲ್​​ ಹೆಂಡತಿಗೆ ಕೊರೊನಾ ಸೋಂಕು ದೃಢಗೊಂಡಿದ್ದು,ಆಕೆಯನ್ನ ಅತುಲ್​ ಲಾಲ್​ ಕೊಲೆ ಮಾಡಿದ್ದಾನೆ. ಇದರ ಬೆನ್ನಲ್ಲೇ ಬಿಲ್ಡಿಂಗ್​​ನಿಂದ ಜಿಗಿದು ಆತನು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ತಲುಪಿರುವ ಪೊಲೀಸರು ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೋಸ್ಕರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇವರು ಬಿಹಾರದ ಪತ್ರಕರ್ ನಗರದಲ್ಲಿ ವಾಸವಾಗಿದ್ದರು. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details