ಕರ್ನಾಟಕ

karnataka

ETV Bharat / bharat

ವರದಕ್ಷಿಣೆ ನೀಡಲಿಲ್ಲವೆಂದು ವಿವಾಹಿತೆಗೆ ಆ್ಯಸಿಡ್​ ಕುಡಿಸಿ ಕೊಂದ ಗಂಡನ ಕುಟುಂಬ! - ವಿವಾಹಿತೆಗೆ ಆ್ಯಸಿಡ್​ ಕುಡಿಸಿ ಕೊಂದ ಗಂಡನ ಕುಟುಂಬ

ವರದಕ್ಷಿಣೆ ನೀಡಲಿಲ್ಲ ಎಂದು ವಿವಾಹಿತೆಗೆ ಗಂಡನ ಮನೆಯವರು ಆ್ಯಸಿಡ್ ಕುಡಿಸಿ, ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ..

HUSBAND MADE WIFE DRINK ACID
HUSBAND MADE WIFE DRINK ACID

By

Published : Apr 16, 2022, 8:03 PM IST

ಮೀರತ್​(ಉತ್ತರ ಪ್ರದೇಶ):ಉತ್ತರಪ್ರದೇಶದಲ್ಲಿ ಹೃದಯ ವಿದ್ರಾವಕ ಘಟನೆವೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಮದುವೆ ಸಂದರ್ಭದಲ್ಲಿ ವರದಕ್ಷಿಣೆ ನೀಡಿಲ್ಲವೆಂದು ವಿವಾಹಿತ ಮಹಿಳೆಗೆ ಆ್ಯಸಿಡ್ ಕುಡಿಸಿ ಕೊಲೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೀರತ್​​ನ ಲಿಸಾಡಿ ಗೇಟ್​​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಂಡ,ಅತ್ತೆ ಸೇರಿ ಈ ಕೃತ್ಯವೆಸಗಿದ್ದಾರೆಂದು ಹೇಳಲಾಗ್ತಿದೆ. ಘಟನೆ ಬೆನ್ನಲ್ಲೇ ಮೃತ ಮಹಿಳೆಯ ಸಂಬಂಧಿಕರು ಆಕೆಯ ಪತಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

ವಿವಾಹಿತ ಮಹಿಳೆಗೆ ಪತಿ ಹಾಗೂ ಅತ್ತೆ ವರದಕ್ಷಿಣೆಗೋಸ್ಕರ ಕಿರುಕುಳ ನೀಡುತ್ತಿದ್ದರೆಂಬ ಆರೋಪ ಕೇಳಿ ಬಂದಿದೆ. ಗುರುವಾರ ರಾತ್ರಿ ಆರೋಪಿ ಪತಿ ಕಟ್ಟಿಕೊಂಡ ಹೆಂಡತಿ ಯಾಸ್ಮಿನ್​ಗೆ ಥಳಿಸಿದ್ದು, ಇದರ ಬೆನ್ನಲ್ಲೇ ಆಕೆಗೆ ಆ್ಯಸಿಡ್ ಕುಡಿಸಿ, ಕೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಸಂಗಾತಿ ಹಾವು ಕೊಂದಿರೋದಕ್ಕೆ ಪ್ರತೀಕಾರ.. ಸೇಡು ತೀರಿಸಿಕೊಳ್ಳಲು 7 ಸಲ ಕಚ್ಚಿದ ನಾಗಿಣಿ!

ಘಟನೆ ಬೆನ್ನಲ್ಲೇ ಸಂತ್ರಸ್ತೆಯ ಕುಟುಂಬಸ್ಥರು ಘಟನಾ ಸ್ಥಳಕ್ಕೆ ತೆರಳಿ, ಗಂಡನ ಮನೆಯವರೊಂದಿಗೆ ಜಗಳವಾಡಿದ್ದು, ಕೆಲ ಹೊತ್ತು ತೀವ್ರವಾದ ವಾಗ್ವಾದ ನಡೆದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಗಂಡ ಮೋನಿಸ್, ಮಾವ ಅರಿಜುದ್ದೀನ್, ಅತ್ತೆ ನರ್ಗೀಸ್​ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ABOUT THE AUTHOR

...view details