ನಳಂದಾ(ಬಿಹಾರ): ಆಸ್ತಿಗಾಗಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ಆಕೆಯ ದೇಹವನ್ನು ಕತ್ತರಿಸಿ ಬೇರೆ ಬೇರೆ ಕಡೆ ಎಸೆದಿರುವ ಅಮಾನವೀಯ ಘಟನೆ ಬಿಹಾರದ ನಳಂದಾದಲ್ಲಿ ನಡೆದಿದೆ. ಮೃತರನ್ನು ಸಂಗೀತಾ ದೇವಿ ಎಂದು ಗುರುತಿಸಲಾಗಿದೆ. ಆರೋಪಿ ನಿತೀಶ್ ಕುಮಾರ್ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಮಾರ್ಚ್ 19 ರಿಂದ ನಾಪತ್ತೆಯಾಗಿದ್ದ ಮಹಿಳೆ.. ಥಾರ್ಥಾರಿ ಪೊಲೀಸ್ ಠಾಣೆ ವ್ಯಾಪ್ತಿ ಮಸನ್ ಘಾಟ್ ಬಳಿ ಈ ದುಷ್ಕೃತ್ಯ ನಡೆದಿದೆ. ಮಾರ್ಚ್ 19 ರಿಂದ ಸಂಗೀತಾ ಕಾಣಿಸಿಕೊಂಡಿರಲಿಲ್ಲ. ಅವರ ದೇಹದ ಭಾಗಗಳು ಗ್ರಾಮದ ವಿವಿಧ ಕಡೆ ಪತ್ತೆಯಾದ ನಂತರ ಈ ಘಟನೆ ಬೆಳಕಿಗೆ ಬಂದಿತ್ತು. ಬೀದಿನಾಯಿಗಳ ದಾಳಿಯಿಂದ ದೇಹದ ಭಾಗಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ಸ್ಥಳೀಯರಿಂದ ಸಿಕ್ಕಿತ್ತು ಮಾಹಿತಿ.. ಪೊಲೀಸರಿಗೆ ದೂರು ದಾಖಲಿಸಿಕೊಂಡು ಪಡೆದ ಪೊಲೀಸರು ತನಿಖೆ ಆರಂಭಿಸಿದ್ದರು. ಮಹಿಳೆಯ ದೇಹದ ಕೈ, ಕಾಲು, ಕುತ್ತಿಗೆ ಪತ್ತೆಯಾಗಿದ್ದವು. ಆದರೆ ಮುಂಡ ನಾಪತ್ತೆಯಾಗಿತ್ತು. ಎರಡು ದಿನದ ಬಳಿಕ ಸ್ಥಳೀಯರು ಬಾವಿಯಲ್ಲಿ ಮಹಿಳೆಯ ಮುಂಡವನ್ನು ಕಂಡು ಮಾಹಿತಿ ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತಳ ಮಾವ ಹೇಳುವ ಪ್ರಕಾರ, ಸಂಗೀತಾ ಕಳೆದ ಐದು ದಿನಗಳಿಂದ ಕಾಣೆಯಾಗಿದ್ದರು. ಸಂಗೀತಾ ಅವರನ್ನು ತಮ್ಮ ಮಗ ನಿತೀಶ್ ಕುಮಾರ್ ಕೊಡಲಿಯಿಂದ ಕೊಂದು ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಶವ ಪತ್ತೆಯಾದ ಬಳಿಕ ಎರಡು ದಿನಗಳ ಹಿಂದೆ ಗ್ರಾಮದ ಬಾವಿಯಿಂದ ಹೊರತೆಗೆಯಲಾಯಿತು. ನಂತರ ಪೊಲೀಸರು ಅದನ್ನು ಮಸಾನ್ ಘಾಟ್‌ನಲ್ಲಿ ಹೂಳಲು ಆದೇಶಿಸಿದ್ದರು. ಶವವನ್ನು ಹೂಳಿದಾಗ, ಬೀದಿ ನಾಯಿಗಳು ಮೃತದೇಹವನ್ನು ಹೊರತೆಗೆದು ಹಾನಿಗೊಳಿಸಿದ್ದವು ಎಂದು ಪೊಲೀಸ್ ಅಧಿಕಾರಿ ಪ್ರಸಾದ್ ತಿಳಿಸಿದ್ದಾರೆ.