ವಿಜಯನಗರಂ(ಆಂಧ್ರಪ್ರದೇಶ):8 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದ ವ್ಯಕ್ತಿ ಇದೀಗ ಆಕೆಯ ಕೊಲೆ ಮಾಡಿದ್ದು, ಕಾಣೆಯಾಗಿದ್ದಾಳೆಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ. ಆಂಧ್ರಪ್ರದೇಶದ ವಿಜಯನಗರಂನಲ್ಲಿ ಈ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ಕೊತ್ತವಲಸ್ ಮಂಡಲದ ಜೋಡಿಮೇರಕದಲ್ಲಿ ಈ ಘಟನೆ ನಡೆದಿದ್ದು, ಹೆಂಡತಿ ಕೊಲೆ ಮಾಡಿ, ಬೆಂಕಿ ಹಚ್ಚಿದ್ದಾನೆ. ಇದರ ಬೆನ್ನಲ್ಲೇ ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ಪತ್ನಿ ಕಾಣೆಯಾಗಿದ್ದಾಳೆಂದು ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲು ಮಾಡಿದ್ದಾನೆ. ದೂರು ದಾಖಲು ಮಾಡಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯಾಂಶ ಬೆಳಕಿಗೆ ಬಂದಿದೆ.
ಇದನ್ನೂ ಓದಿರಿ:ಕೇಂದ್ರ ಬಜೆಟ್ನಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ.. ಡಿಜಿಟಲ್ ಕೃಷಿಯತ್ತ ನಮ್ಮ ಗುರಿ : ನಮೋ
ಪ್ರೇಮ ವಿವಾಹವಾಗಿದ್ದ ಜೋಡಿ: ಕಳೆದ ಎಂಟು ವರ್ಷಗಳ ಹಿಂದೆ ಶ್ರೀಕಾಕುಳಂ ಜಿಲ್ಲೆಯ ಲಕ್ಷ್ಮೀ ಜೊತೆ ನಾಗರಾಜ್ ಪ್ರೇಮ ವಿವಾಹವಾಗಿದ್ದನು. ಈ ದಂಪತಿಗೆ ಒಂದು ಮಗು ಇದೆ. ಕಳೆದ ತಿಂಗಳ 30ರಿಂದ ಪತ್ನಿ ಲಕ್ಷ್ಮೀ ಕಾಣಿಸುತ್ತಿಲ್ಲವೆಂದು ನಾಗರಾಜ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾನೆ.
ನಾಗರಾಜನ ವರ್ತನೆಯಿಂದ ಅನುಮಾನಗೊಂಡಿರುವ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನಿಗೆ ಬೇರೆ ಮಹಿಳೆ ಜೊತೆ ಸಂಬಂಧವಿರುವ ಮಾಹಿತಿ ಹಂಚಿಕೊಂಡಿದ್ದಾರೆ. ನಾಗರಾಜನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವ ವಿಷಯ ಬಾಯ್ಬಿಟ್ಟಿದ್ದಾನೆ.