ಕರ್ನಾಟಕ

karnataka

ETV Bharat / bharat

ಮದುವೆಯಾಗಿ ಎರಡೇ ತಿಂಗಳಿಗೆ ಮನಸ್ತಾಪ.. ಬಿ.ಟೆಕ್ ವಿದ್ಯಾರ್ಥಿನಿ ಕೊಂದು ಕಥೆ ಕಟ್ಟಿದ ಗಂಡ! - ವಿವಾಹೇತರ ಸಂಬಂಧಕ್ಕೆ ಹೆಂಡತಿ ಕೊಲೆ

ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಬಹುದು ಎಂಬ ಕಾರಣದಿಂದಾಗಿ ಕಟ್ಟಿಕೊಂಡ ಹೆಂಡತಿಯನ್ನೇ ಕೊಲೆ ಮಾಡಿರುವ ಪಾಪಿ ಗಂಡ, ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಬಿಂಬಿಸುವ ನಾಟಕವಾಡಿದ್ದಾನೆ.

Husband killed his wife
Husband killed his wife

By

Published : Feb 6, 2021, 9:23 AM IST

Updated : Feb 6, 2021, 12:34 PM IST

ಹೈದರಾಬಾದ್​(ತೆಲಂಗಾಣ):ನವವಿವಾಹಿತೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ತೆಲಂಗಾಣದ ಖಮ್ಮಮ್ ಎಂಬಲ್ಲಿ ನಡೆದಿದ್ದು, ಗಂಡನೇ ಈ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ.

ಬಿ.ಟೆಕ್​ ವಿದ್ಯಾರ್ಥಿನಿ ಕೊಲೆ ಮಾಡಿದ ಗಂಡ

ನವ್ಯಾ ರೆಡ್ಡಿ(22) ಪತಿಯಿಂದಲೇ ಕೊಲೆಯಾಗಿರುವ ಮಹಿಳೆ. ದ್ವಿತೀಯ ವರ್ಷದ ಬಿ.ಟೆಕ್​ ವಿದ್ಯಾರ್ಥಿನಿಯಾಗಿದ್ದ ನವ್ಯಾ ಸಾಫ್ಟವೇರ್ ಇಂಜಿನಿಯರ್​ ನಾಗಿಶೆಶು ರೆಡ್ಡಿ ಜೊತೆ ಕಳೆದ ಡಿಸೆಂಬರ್ 9ರಂದು ವಿವಾಹವಾಗಿದ್ದಳು. ಮದುವೆಯಾದ ಬಳಿಕ ನಾಗಿಶೆಶುಗೆ ಬೇರೆ ಮಹಿಳೆವೋರ್ವಳಿಂದ ಮೇಲಿಂದ ಮೇಲೆ ಫೋನ್ ಕರೆ, ಮೆಸೇಜ್​​ ಬರುತ್ತಿದ್ದವು. ಇದರಿಂದ ನವ್ಯಾ ವಿಚಲಿತಗೊಂಡಿದ್ದಳು. ಜತೆಗೆ ಇದು ಇಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು ಎನ್ನಲಾಗ್ತಿದೆ. ತನ್ನ ವಿವಾಹೇತರ ಸಂಬಂಧಕ್ಕೆ ನವ್ಯಾ ಅಡ್ಡಿಯಾಗಬಹುದು ಎಂಬ ಕಾರಣದಿಂದಲೇ ಪತ್ನಿಯ ಕೊಲೆ ಮಾಡಿದ್ದಾನೆ.

ಹೆಂಡತಿ ಕೊಲೆ ಮಾಡಿದ ಪಾಪಿ ಗಂಡ

ಇದನ್ನೂ ಓದಿ: ಕಲಘಟಗಿಯಲ್ಲಿ ವಿದ್ಯಾರ್ಥಿಗೆ ಚಾಕು ಇರಿತ: ಪೊಲೀಸರಿಂದ ತೀವ್ರ ವಿಚಾರಣೆ

ಫೆ.2ರಂದು ಕಾಲೇಜ್​ಗೆ ಹೋಗಲು ಸಜ್ಜಾಗಿದ್ದ ನವ್ಯಾಳನ್ನ ನಾಗಶೆಶು ಬಿಟ್ಟು ಬರಲು ಮುಂದಾಗುತ್ತಾನೆ. ಸ್ಕೂಟರ್​ ಮೇಲೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯೆ ಜ್ಯೂಸ್ ಕುಡಿಯಲು ವಾಹನ ನಿಲ್ಲಿಸಿದ್ದಾರೆ. ಜ್ಯೂಸ್​ನಲ್ಲಿ ನಿದ್ದೆ ಮಾತ್ರೆ ಬೆರೆಸಿ ನೀಡಿದ್ದು, ಈ ವೇಳೆ ಮೂರ್ಛೆ ಹೋಗಿರುವ ನವ್ಯಾಳನ್ನ ಮರಕ್ಕೆ ನೇಣು ಬಿಗಿದು ಕೊಲೆ ಮಾಡಿದ್ದಾನೆ.

ಇದಾದ ಬಳಿಕ ಇದೊಂದು ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ ನಡೆಸಿದ್ದು, ನವ್ಯಾಳ ಫೋನ್​ನಿಂದಲೇ ಆಕೆಯ ತಂದೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಮೆಸೇಜ್ ಮಾಡಿದ್ದಾನೆ. ತಕ್ಷಣವೇ ಮೊಬೈಲ್​ ಸ್ವಿಚ್​ ಆಫ್​ ಮಾಡಿದ್ದಾನೆ. ಘಟನೆ ಬಳಿಕ ಖುದ್ದಾಗಿ ಪೊಲೀಸ್ ಠಾಣೆಯಲ್ಲಿ ಹೆಂಡತಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಫೆ. 2ನೇ ತಾರೀಖಿನ ಸ್ಥಳೀಯ ಸಿಸಿಟಿವಿ ವಿಡಿಯೋ ತಪಾಸಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಇದೀಗ ಆತನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Last Updated : Feb 6, 2021, 12:34 PM IST

ABOUT THE AUTHOR

...view details