ಕರ್ನಾಟಕ

karnataka

ETV Bharat / bharat

ಪತ್ನಿಯ ನಗ್ನ ಚಿತ್ರಗಳನ್ನು ಆ್ಯಪ್​ದಲ್ಲಿ ಹಂಚಿಕೊಂಡಿದ್ದ ಪತಿ ಬಂಧನ

ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುವ ಆ್ಯಪ್‌ನಲ್ಲಿ ಪತ್ನಿಯ ನಗ್ನ ಚಿತ್ರಗಳನ್ನು ಹಂಚಿಕೊಂಡ ಪತಿಯನ್ನು ಕೇರಳದ ಕುನ್ನಂಕುಲಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

arrested
ನಗ್ನ ಚಿತ್ರಗಳನ್ನು ಆ್ಯಪ್​ದಲ್ಲಿ ಹಂಚಿಕೊಂಡಿದ್ದ ಪತಿ ಬಂಧನ

By

Published : May 16, 2023, 7:12 PM IST

ತ್ರಿಶೂರ್(ಕೇರಳ) ಮೊಬೈಲ್‌ನಲ್ಲಿ ತನ್ನ ಪತ್ನಿಯ ನಗ್ನ ಚಿತ್ರಗಳನ್ನು ತೆಗೆದು ಬಳಿಕ ಆ ಅಶ್ಲೀಲ ಫೋಟೋಗಳನ್ನು ಶೇರ್ ಮಾಡುವ ಮೂಲಕ ಆ್ಯಪ್‌ನಲ್ಲಿ ಡೌನ್​ಲೋಡ್ ಮಾಡುತ್ತಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ತ್ರಿಶೂರ್ ಜಿಲ್ಲೆಯ ಎರುಮಪೆಟ್ಟಿ ಮೂಲದ 33 ವರ್ಷದ ವ್ಯಕ್ತಿ ಬಂಧಿತ ಆರೋಪಿ. ಎರಡೂವರೆ ವರ್ಷಗಳ ಹಿಂದೆ ಪಾಲಕ್ಕಾಡ್ ಮೂಲದ ಮಹಿಳೆಯನ್ನು ಈತ ವಿವಾಹವಾಗಿದ್ದ. ಮದುವೆಯ ಸಂದರ್ಭದಲ್ಲಿ ವಧುವಿನ ಮನೆಯವರು ವರದಕ್ಷಿಣೆಯಾಗಿ 80 ಗ್ರಾಂ ಚಿನ್ನ ನೀಡಿದ್ದರು. ಆದರೆ ಮದುವೆಯಾದ ನಂತರವೂ ಹೆಚ್ಚು ಹಣ ನೀಡುವಂತೆ ವರದಕ್ಷಿಣೆಗಾಗಿ ತನ್ನ ಪತ್ನಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು ಹಾಗೂ ಇದರೊಂದಿಗೆ ತನ್ನ ಪತ್ನಿಯ ನಗ್ನ ಚಿತ್ರಗಳನ್ನು ಆ್ಯಪ್​ವೊಂದಕ್ಕೆ ಅಪ್​ಲೋಡ್​ ಮಾಡುತ್ತಿದ್ದ ಬಳಿಕ ಅದೇ ಆ್ಯಪ್​ನಿಂದ ಡೌನಲೋಡ್ ಮಾಡಿದ್ದನು ಎಂದು ಪೊಲೀಸರು ಆರೋಪಿಸಿದ್ದಾರೆ.

ಯುವತಿಯರ ಬೆತ್ತಲೆ ಚಿತ್ರಗಳನ್ನು ವಿನಿಮಯ ಮಾಡಿಕೊಳ್ಳುವ ಆ್ಯಪ್ ಇದಾಗಿದೆ. ಕೆಲವರು ತಮ್ಮ ಪಾರ್ಟ್​ನರ್​ಗಳನ್ನು ಪರಿಚಯಿಸಲು ನಗ್ನ ಫೋಟೋ ಮತ್ತು ವಿಡಿಯೋಗಳನ್ನು ಪರಸ್ಪರ ಹಂಚಿಕೊಳ್ಳಲು ಈ ಅಪ್ಲಿಕೇಶನ್ ಅನ್ನು ಬಳಸುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಯುವತಿಯ ತವರು ಮನೆಯವರು ಆರ್ಥಿಕವಾಗಿ ಹಿಂದುಳಿದಿರುವರು. ವರದಕ್ಷಿಣೆಗಾಗಿ ಪತಿ ಸಹಿತ ಆತನ ಕುಟುಂಬ ಸದಸ್ಯರು ಮಹಿಳೆಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ಆದರೂ ಮಹಿಳೆ ವರದಕ್ಷಿಣೆ ಕಾಟಕ್ಕೆ ಎದೆಗುಂದಿರಲಿಲ್ಲ. ಆದರೆ ಆ್ಯಪ್‌ನಲ್ಲಿ ತನ್ನ ನಗ್ನ ಚಿತ್ರಗಳು ವೈರಲ್ ಆಗುತ್ತಿದ್ದಂತೆ ತಕ್ಷಣ ಮಹಿಳೆ ಕುನ್ನಂಕುಲಂ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಪೊಲೀಸರು ಮಹಿಳೆಯ ಪತಿಯ ಮೊಬೈಲ್ ಫೋನ್‌ನ ಪರಿಶೀಲಿಸಿದಾಗ, ಆ್ಯಪ್‌ನಲ್ಲಿ ತನ್ನ ಪತ್ನಿ ನಗ್ನ ಚಿತ್ರಗಳನ್ನು ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.

ತಂದೆ ಮಗನಿಗೆ ನಾರಿಯರಿಂದ ಥಳಿತ.. ಈ ಹಿಂದೆಯೂ ತ್ರಿಶೂರ್​ ಜಿಲ್ಲೆಯಲ್ಲಿ ಇಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿತ್ತು. ವ್ಯಾಟ್ಸ್​ಆ್ಯಪ್​ನಲ್ಲಿ ಮಾರ್ಫ್​ ಮಾಡಿದ ನಗ್ನ ಚಿತ್ರಗಳನ್ನು ಹಂಚುತ್ತಿದ್ದ ತಂದೆ ಮತ್ತು ಮಗನನ್ನು ಹಿಡಿದು ಮಹಿಳೆಯರೇ ಧರ್ಮದೇಟು ನೀಡಿದ್ದರು. ಮುರಿಯಾಡ್​ ಮೂಲದ ಶಾಜಿ ಮತ್ತು ಅವರ ಪುತ್ರ ಸಜನ್​ ಗ್ರಾಮದ ಕೆಲ ಮಹಿಳೆಯರ ಮಾರ್ಫ್ ಮಾಡಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಆದರೆ, ಈ ವಿಚಾರದ ಬಗ್ಗೆ ಗ್ರಾಮಸ್ಥರು ಅವರನ್ನು ಪ್ರಶ್ನಿಸಿದಾಗ ಗಲಭೆ ಉಂಟಾಗಿತ್ತು. ಗ್ರಾಮದ ಮಹಿಳೆಯರು ಮತ್ತು ಶಾಜಿ ಕುಟುಂಬದ ನಡುವೆ ಮಾರಾಮಾರಿ ನಡೆದಿತ್ತು. ಘರ್ಷಣೆಯಲ್ಲಿ ಎರಡೂ ಕಡೆಯವರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದರು.

ಶಾಜಿ ಕುಟುಂಬವು ಮುರಿಯಾಡ್​ ಸಿಯೋನ್​ ಶ್ರೈನ್​ ಚರ್ಚ್​ನ ಭಕ್ತರಾಗಿದ್ದರು. ಸ್ವಲ್ಪ ವರ್ಷಗಳ ಬಳಿಕ ಅಲ್ಲಿಂದ ಬೇರೆಡೆ ಹೋಗಿದ್ದರು. ನಂತರ ಚರ್ಚ್​ ಮತ್ತು ಶಾಜಿ ಕುಟುಂಬದ ನಡುವೆ ನಿರಂತರವಾಗಿ ಸಮಸ್ಯೆಗಳು ಉಂಟಾಗುತ್ತಲೇ ಇದ್ದವು. ಈ ಹಿಂದೆ ಶಾಜಿ ಅವರ ಕಾರು ಶಾಲೆಗೆ ಹೋಗುತ್ತಿದ್ದ ಬಾಲಕನ ಮೇಲೆ ಹರಿದಿದೆ ಎಂದು ಅವರ ಪುತ್ರ ಸಜನ್​ ವಿರುದ್ಧ ತ್ರಿಶೂರ್​ ಚೈಲ್ಡ್​ ಲೈನ್​ನಲ್ಲಿ ದೂರು ದಾಖಲಾಗಿತ್ತು. ಇದಾದ ಬಳಿಕ ಗ್ರಾಮದ ಮಹಿಳೆಯರ ನಗ್ನ ಚಿತ್ರವನ್ನು ಮಾರ್ಫ್​ ಮಾಡಿ ಹಲವರ ಮೊಬೈಲ್​ಗೆ ಕಳುಹಿಸಿದ್ದಾರೆ ಎಂಬ ಆರೋಪ ಶಾಜಿ ಅವರ ವಿರುದ್ಧ ಕೇಳಿ ಬಂದಿತ್ತು.

ಇದನ್ನೂಓದಿ:ಯುಪಿಯಲ್ಲಿ ಲವ್ ಜಿಹಾದ್ ಆರೋಪ.. ನ್ಯಾಯಾಲಯದ ಮೆಟ್ಟಿಲೇರಿದ ಸಂತ್ರಸ್ತೆ

ABOUT THE AUTHOR

...view details