ಪಾಲಕ್ಕಾಡ್:ಬೆಳಗ್ಗೆ ಹಲ್ಲುಜ್ಜುವ ಮುನ್ನ ತಮ್ಮ ಮಗುವಿಗೆ ಮುತ್ತು ಕೊಡುವುದನ್ನು ವಿರೋಧಿಸಿದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಭಯಾನಕ ಪ್ರಕರಣ ಕೇರಳದ ಪಾಲಕ್ಕಾಡ್ನಲ್ಲಿ ನಡೆದಿದೆ. ಕೊಯಮತ್ತೂರು ಮೂಲದ ದೀಪಿಕಾ (28) ಕೊಲೆಯಾದ ಗೃಹಿಣಿ. ಪತಿ ಅವಿನಾಶ್ (30) ಆರೋಪಿ. ಪಾಲಕ್ಕಾಡ್ನ ನಿವಾಸಿಯಾಗಿದ್ದ ಇವರು 2019 ರಲ್ಲಿ ವಿವಾಹವಾಗಿದ್ದರು.
ಅವಿನಾಶ್ ಮತ್ತು ದೀಪಿಕಾಗೆ ಒಂದೂವರೆ ವರ್ಷದ ಮಗನಿದ್ದಾನೆ. ಬೆಳಗ್ಗೆ ಎದ್ದಾಗ ಅವಿನಾಶ್ ತಮ್ಮ ಮಗನಿಗೆ ಪ್ರೀತಿಯ ಮುತ್ತು ನೀಡುತ್ತಿದ್ದರು. ಇದನ್ನು ಪತ್ನಿ ದೀಪಿಕಾ ವಿರೋಧಿಸುತ್ತಿದ್ದರು. ಹಲ್ಲುಜ್ಜದೇ ಮಗನಿಗೆ ಕಿಸ್ ಮಾಡಬೇಡ ಎಂದು ತಗಾದೆ ತೆಗೆಯುತ್ತಿದ್ದರು. ಇದರಿಂದ ರೋಸಿ ಹೋಗಿದ್ದ ಅವಿನಾಶ್ ದೀಪಿಕಾ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.