ಕರ್ನಾಟಕ

karnataka

ETV Bharat / bharat

ಪ್ರೀತಿ ಉಳಿಸಲು ಪತಿಯ ವಿವಾಹಕ್ಕೆ ಪತ್ನಿ ಪೌರೋಹಿತ್ಯ​.. ಸುಖಾಂತ್ಯ ಕಂಡ ತ್ರಿಕೋನ ಪ್ರೇಮಕಥೆ - ಸುಖಾಂತ್ಯ ಕಂಡ ತ್ರಿಕೋನ ಪ್ರೇಮಕಥೆ

ಟಿಕ್​ಟಾಕ್​ನಲ್ಲಿ ಪರಿಚಯವಾಗಿದ್ದ ಇಬ್ಬರು ಪ್ರೇಮಿಗಳು ಈಗ ಒಂದಾಗಲು ಬಯಸಿದ್ದರು. ಆದರೆ, ಆತನಿಗೆ ಅದಾಗಲೇ ಮದುವೆಯಾಗಿತ್ತು. ಪ್ರೀತಿ ಅಳಿಯದಿರಲಿ ಎಂದು ಪ್ರೇಮಿಗಳಿಬ್ಬರ ಮದುವೆಗೆ ಮೊದಲ ಹೆಂಡತಿಯೇ ಪೌರೋಹಿತ್ಯ ವಹಿಸಿದ್ದಾರೆ.

husband-got-second-marriage-with-the-first-wife-s-help
ಪ್ರೀತಿ ಉಳಿಸಲು ಪತಿಯ ವಿವಾಹಕ್ಕೆ ಪತ್ನಿ ಪೌರೋಹಿತ್ಯ​

By

Published : Sep 22, 2022, 3:47 PM IST

ತಿರುಪತಿ(ಆಂಧ್ರಪ್ರದೇಶ):ಆತ ಟಿಕ್​ಟಾಕ್​ನಲ್ಲಿ ರೀಲ್ಸ್​ ಮಾಡುತ್ತಿದ್ದ. ಆತನಂತೆಯೇ ಅಕೆಯೂ ಚಿಕ್ಕ ವಿಡಿಯೋಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದಳು. ಇಬ್ಬರಿಗೂ ಪರಸ್ಪರ ಪರಿಚಯವಾಗಿ, ಪ್ರೀತಿ ಚಿಗುರೊಡೆದಿತ್ತು. ಆದರೆ, ಯಾವುದೋ ಕಾರಣಕ್ಕೆ ಈ ಇಬ್ಬರೂ ದೂರ ದೂರವಿದ್ದರು.

ಸುಮಾರು ವರ್ಷಗಳ ನಂತರ ಆ ಪ್ರಿಯತಮೆ ತನ್ನ ಪ್ರೇಮಿಯನ್ನು ಹುಡುಕಿಕೊಂಡು ಬಂದಳು. ಆದರೆ, ಆಕೆಗೆ ಶಾಕ್​ ಕಾದಿತ್ತು. ಕಾರಣ ಆಕೆಯ ಪ್ರೇಮಿ ಮದುವೆಯ ಬಂಧನಕ್ಕೆ ಸಿಲುಕಿದ್ದ. ಇದನ್ನು ಕೇಳಿ ಅರಗಿಸಿಕೊಳ್ಳಲಾಗದ ಪ್ರಿಯತಮೆ ಕಣ್ಣೀರಿಟ್ಟಳು.

ಈ ವಿಷಯ ತಿಳಿದ ಆತನ ಹೆಂಡತಿಗೂ ದಿಗ್ಭ್ರಮೆಯಾಗಿತ್ತು. ಕಾರಣ ತನ್ನ ಗಂಡ ಇನ್ನೊಬ್ಬಾಕೆ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಎಂಬುದು ಆಕೆಗೆ ನುಂಗಲಾರದ ತುತ್ತಾಗಿತ್ತು. ಕಾರಣ ಆಕೆಯೂ ಆತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇಬ್ಬರನ್ನೂ ಒಂದುಗೂಡಿಸಿದ್ದು ಇದೇ ಟಿಕ್​ಟಾಕ್​. ಆದರೀಗ ಇನ್ನೊಬ್ಬ ಪ್ರಿಯತಮೆಯ ಎಂಟ್ರಿ ಸಂದಿಗ್ಧತೆ ಸೃಷ್ಟಿಸಿತ್ತು.

ಇಬ್ಬರು ಹೆಂಡತಿಯರ ಗಂಡನಾದ ಪ್ರೇಮಿ:ಆತನಿಗೆ ಮದುವೆಯಾಗಿದ್ದರೂ ಪ್ರೀತಿ ಕೇಳಿ ಬಂದ ಪ್ರಿಯತಮೆಗೆ ಪ್ರೀತಿಯ ಗುಂಗು ಹೋಗಲಿಲ್ಲ. ಇತ್ತ ಗಂಡನ ಬಿಟ್ಟು ಕೊಡಲು ಹೆಂಡತಿ ಒಪ್ಪಿಗೆಯೂ ಇರಲಿಲ್ಲ. ಬಳಿಕ ಮೂವರೂ ಒಟ್ಟಿಗೆ ಕುಳಿತು ಚರ್ಚಿಸಿಕೊಂಡು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅದು ಮೂವರೂ ಒಟ್ಟಿಗೆ ಬದುಕಲು ನಿಶ್ವಯಿಸಿದ್ದಾರೆ.

ಈ ಬಗ್ಗೆ ಪತಿಯೊಂದಿಗೆ ಮಾತನಾಡಿದ ಹೆಂಡತಿ ಪ್ರಿಯತಮೆಯನ್ನು ಮದುವೆಯಾಗಲು ಒಪ್ಪಿಗೆ ನೀಡಿದ್ದಾಳೆ. ಒಂದೆಡೆ ಪ್ರಿಯತಮೆ, ಇನ್ನೊಂದೆಡೆ ಹೆಂಡತಿ ಇಬ್ಬರೂ ಒಪ್ಪಿ ತನ್ನೊಂದಿಗೆ ಬದುಕಲು ಸಿದ್ಧರಾಗಿದ್ದಾಗ ಆತ ಇದಕ್ಕೆ ಸಮ್ಮತಿಸಿದ್ದಾನೆ. ಮೊದಲ ಹೆಂಡತಿಯ ಒಪ್ಪಿಗೆಯ ಮೇರೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ಆತ ಪ್ರಿಯತಮೆಯನ್ನು ವರಿಸಿದ್ದಾನೆ. ಇಲ್ಲಿಗೆ ತ್ರಿಕೋನ ಪ್ರೇಮಕಥೆ ಸುಖಾಂತ್ಯ ಕಂಡಿದೆ.

ಸಿನಿಮಾ ಕಥೆಯಂತಿರುವ ಇದು ನಡೆದಿದ್ದು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ. ಮೊದಲ ಪತ್ನಿ ವಿಶಾಖಪಟ್ಟಣದವರಾಗಿದ್ದರೆ, ಎರಡನೇ ಆಕೆ ಕಡಪ ಮೂಲದವರು. ಇಬ್ಬರು ಹೆಂಡಿರ ಮುಂದಿನ ಗಂಡ ತಿರುಪತಿ ಜಿಲ್ಲೆಯ ನಿವಾಸಿ. ಈ ಅಪರೂಪದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಕೂಡ ವೈರಲ್ ಆಗಿದೆ.

ಓದಿ:ತಿಂಗಳ ಹಿಂದೆ ಮದುವೆಯಾಗಿದ್ದ ಹೆಂಡತಿಗಾಗಿ ಕದ್ದ ಮಾಲು ಸಮೇತ ಪೊಲೀಸರಿಗೆ ಶರಣಾದ ಕಳ್ಳ

ABOUT THE AUTHOR

...view details