ಕರ್ನಾಟಕ

karnataka

ETV Bharat / bharat

ಕದ್ದು ಮುಚ್ಚಿ ನಡೆಯುತ್ತಿತ್ತು ಕಚಗುಳಿ.. 24 ವರ್ಷದ ಬಳಿಕ ಸಹೋದರನಿಗೆ ಪತ್ನಿ ತ್ಯಾಗ ಮಾಡಿದ ಪತಿ! - ಕದ್ದು ಮುಚ್ಚಿ ನಡೆಯುತ್ತಿತ್ತು ಕಚಗುಳಿ

ವಿವಾಹೇತರ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಸಹೋದರನಿಗೆ ಮದುವೆ ಮಾಡಿಸಿದ್ದಾರೆ.

husband-ends-24-year-wedlock-gets-wife-married-to-brother-know-why
24 ವರ್ಷದ ದಾಂಪತ್ಯ.. ಅಕ್ರಮ ಸಂಬಂಧ... ಸಹೋದರನಿಗೆ ಪತ್ನಿಯ ಮದುವೆ ಮಾಡಿಸಿದ ಪತಿ

By

Published : Oct 30, 2022, 7:56 PM IST

ಶಾಂತಿಪುರ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ವ್ಯಕ್ತಿಯೋರ್ವ ತನ್ನ ಸಹೋದರನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಪತ್ನಿಯನ್ನು ಆತನಿಗೆ ಕೊಟ್ಟು ಮದುವೆ ಮಾಡಿಸಿದ್ದಾನೆ. ಈ ಮೂಲಕ ತನ್ನ 24 ವರ್ಷಗಳ ದಾಂಪತ್ಯವನ್ನು ಆ ವ್ಯಕ್ತಿ ಕೊನೆಗೊಳಿಸಿದ್ದಾನೆ.

ನಾಡಿಯಾ ಜಿಲ್ಲೆಯ ಶಾಂತಿಪುರ ಪುರಸಭೆಯ ವಾರ್ಡ್ ನಂ.1ರಲ್ಲಿ ಈ ಅಪರೂಪದ ಮದುವೆ ನಡೆದಿದೆ. ಇಲ್ಲಿನ ನಿವಾಸಿ ಅಮೂಲ್ಯ ದೇಬನಾಥ್ ಎಂಬಾತ 24 ವರ್ಷಗಳ ಹಿಂದೆ ಶಾಂತಿಪುರ ಪೊಲೀಸ್ ಠಾಣೆಯ ಬಬ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ದೀಪಾಲಿ ಎಂಬುವರನ್ನು ವಿವಾಹವಾಗಿದ್ದರು.

ದೇಬನಾಥ್ ಮತ್ತು ದೀಪಾಲಿ ದಂಪತಿಯ ದಾಂಪತ್ಯ ಜೀವನ 24 ವರ್ಷಗಳ ಕಾಲ ಸಾಮಾನ್ಯವಾಗಿಯೇ ಇತ್ತು. ಜೊತೆಗೆ ಈ ದಂಪತಿಗೆ 22 ವರ್ಷದ ಮಗನಿದ್ದು, ಆತನಿಗೂ ವಿವಾಹವಾಗಿದೆ. ದೇಬನಾಥ್​ ತನ್ನ ಕೆಲಸದ ನಿಮಿತ್ತ ಬೇರೆ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ. ಈತನ ಸೊಸೆ ಸಹ ತವರು ಮನೆಯಲ್ಲಿ ನೆಲೆಸಿದ್ದಾರೆ. ಈ ನಡುವೆ ಕೆಲ ದಿನಗಳ ಹಿಂದೆ ಪತ್ನಿ ದೀಪಾಲಿ ಮತ್ತು ತನ್ನ ಸಹೋದರ ಕೇಶಬ್‌ ಒಟ್ಟಾಗೆ ಇದ್ದಾಗ ರೆಡ್‌ಹ್ಯಾಂಡ್‌ ಆಗಿ ದೇಬನಾಥ್​ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದರಿಂದ ಪತ್ನಿಯ ವಿವಾಹೇತರ ಸಂಬಂಧದ ಬಗ್ಗೆ ಗೊತ್ತಾಗಿದೆ.

ಹಲವು ತಿಂಗಳಿಂದ ಪತ್ನಿಯ ಚಲನವಲನದ ಬಗ್ಗೆ ದೇಬನಾಥ್​ಗೆ ಅನುಮಾನವಿತ್ತು. ಅಲ್ಲದೇ, ಸ್ಥಳೀಯರಿಂದಲೂ ಪತ್ನಿಯ ಬಗ್ಗೆ ಬೇರೆ ಕಥೆಗಳನ್ನೂ ಆತ ಕೇಳಿದ್ದ. ಈ ಅನುಮಾನಗಳು ಹೆಚ್ಚಾಗಿ ಒಂದು ದಿನ ಸಹೋದರನೊಂದಿಗೆ ಪತ್ನಿ ರಾಜಿ ಸ್ಥಿತಿಯಲ್ಲಿದ್ದರುವುದನ್ನು ಕಂಡು ಆಗ ಕೋಣೆಗೆ ಹೊರಗಿನಿಂದ ಬೀಗ ಹಾಕಿ ನೆರೆಹೊರೆಯವರನ್ನು ಕರೆದು ತೋರಿಸಿದ್ದ ಎಂದು ಮೂಲಗಳು ತಿಳಿಸಿವೆ.

ಆದ್ದರಿಂದ ದೇಬನಾಥ್​ ತನ್ನ ಪತ್ನಿ ದೀಪಾಲಿಯೊಂದಿಗಿನ ತನ್ನ 24 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಜೊತೆಗೆ ದೀಪಾಲಿಗೆ ತನ್ನ ಸಹೋದರ ಕೇಶಬ್‌ನೊಂದಿಗೆ ಮದುವೆ ಮಾಡಲು ತೀರ್ಮಾನಿಸಿ, ನೆರೆಹೊರೆಯವರ ಸಮ್ಮುಖದಲ್ಲೇ ಕಲ್ಯಾಣ ಕಾರ್ಯ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ:72 ವರ್ಷದ ವೃದ್ಧನ ಮೇಲೆ ಪುತ್ರ, ಸೊಸೆ, ಮಗಳಿಂದ ಅಮಾನವೀಯ ಹಲ್ಲೆ: ವಿಡಿಯೋ

ABOUT THE AUTHOR

...view details