ಕರ್ನಾಟಕ

karnataka

ETV Bharat / bharat

ಕೊರೊನಾದಿಂದ ಏಳೇ ದಿನಕ್ಕೆ ಗಂಡನನ್ನು ಕಳೆದುಕೊಂಡ ಪತ್ನಿ! - ಹಜಾರಿಬಾಗ್​ ಕೊರೊನಾ ಸುದ್ದಿ

ದೇಶಾದ್ಯಂತ ಕೊರೊನಾ ಹಾವಳಿ ಹೆಚ್ಚಾಗ್ತಿದೆ. ಅನೇಕರು ಈ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಅದರಲ್ಲಿ ಯುವಕರೇ ಹೆಚ್ಚು ಸಾವನ್ನಪ್ಪುತ್ತಿರುವುದು ದುರದೃಷ್ಟಕರ ಸಂಗತಿ. ಈಗ ಕೆಲ ದಿನಗಳ ಹಿಂದೆ ಮದುವೆಯಾಗಿದ್ದ ಯುವಕನೊಬ್ಬನನ್ನು ಕೊರೊನಾ ಬಲಿ ಪಡೆದಿದೆ. ಈ ಘಟನೆ ಜಾರ್ಖಂಡ್​ನ ಹಜಾರಿಬಾಗ್​ನಲ್ಲಿ ನಡೆದಿದೆ.

husband died of corona in Hazaribag  Woman becomes widow due to Corona  Husband died after marriage in Hazaribag  One died from corona in Hazaribagh  Hazaribagh corona news  Hazaribagh news  ಕೊರೊನಾದಿಂದ ಏಳೇ ದಿನಕ್ಕೆ ಗಂಡನನ್ನು ಕಳೆದುಕೊಂಡ ಪತ್ನಿ  ಹಜಾರಿಬಾಗ್​ನಲ್ಲಿ ಕೊರೊನಾದಿಂದ ಏಳೇ ದಿನಕ್ಕೆ ಗಂಡನನ್ನು ಕಳೆದುಕೊಂಡ ಪತ್ನಿ  ಹಜಾರಿಬಾಗ್​ ಕೊರೊನಾ ಸುದ್ದಿ  ಹಜಾರಿಬಾಗ್​ ಸುದ್ದಿ
ಕೊರೊನಾದಿಂದ ಏಳೇ ದಿನಕ್ಕೆ ಗಂಡನನ್ನು ಕಳೆದುಕೊಂಡ ಪತ್ನಿ

By

Published : May 7, 2021, 12:11 PM IST

Updated : May 7, 2021, 12:19 PM IST

ಹಜಾರಿಬಾಗ್​:ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು, ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಕೊರೊನಾ ಮಹಾಮಾರಿ ಸೋಂಕು ಏಳು ದಿನಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತನನ್ನು ಬಲಿ ಪಡೆದಿದೆ.

ಕೊರೊನಾದಿಂದ ಏಳೇ ದಿನಕ್ಕೆ ಗಂಡನನ್ನು ಕಳೆದುಕೊಂಡ ಪತ್ನಿ

ಜಿಲ್ಲೆಯ ಝರ್ಪೈ ಗ್ರಾಮದ ನಿವಾಸಿ ಕೈಲೇಶ್ವರ್​ ಮಹತೊ ಪುತ್ರಿ ಪ್ರಿಯಾಂಕಾ ಮದುವೆ ಏಪ್ರಿಲ್​ 28ರಂದು ಹಜಾರಿಬಾಗ್​ ಹುಟ್ಪಾ ನಿವಾಸಿ ಅನಿಲ್​ ಮಹತೊ ಜೊತೆ ನಡೆದಿತ್ತು. ಪ್ರಿಯಾಂಕಾ ನೂರೊಂದು ಕನಸುಗಳನ್ನು ಹೊತ್ತುಕೊಂಡು ಗಂಡ ಅನಿಲ್​ ಮನೆಗೆ ತೆರಳಿದ್ದಳು. ಆದ್ರೆ ಮದುವೆಯಾಗಿ ಏಳೇ ದಿನಕ್ಕೆ ಅನಿಲ್​ ಕೊರೊನಾದಿಂದ ಮೃತಪಟ್ಟಿದ್ದಾನೆ.

ಮದುವೆಗೂ ಮುನ್ನ ಅನಿಲ್​ಗೆ ಕೊರೊನಾ ಲಕ್ಷಣಗಳಿದ್ದವು. ಆದ್ರೆ ಮದುವೆ ಹತ್ತಿರ ಬಂದ ಹಿನ್ನೆಲೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾನೆ ಎನ್ನಲಾಗಿದೆ. ಮದುವೆ ಮಾಡಿಕೊಂಡ ಬಳಿಕ ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಸುತ್ತಲೇ ಇದ್ದಾಗ ಆಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕಿತ್ಸೆ ಫಲಿಸದೇ ಗುರುವಾರ ಅನಿಲ್​ ಕೊರೊನಾಗೆ ಬಲಿಯಾಗಿದ್ದಾನೆ.

ಒಂದು ಸಣ್ಣ ತಪ್ಪಿನಿಂದ ಒಂದು ಹೆಣ್ಣಿನ ಜೀವನ ಹಾಳಾದಂತಾಗಿದೆ. ನವವಿವಾಹಿತೆಯ ನೂರೊಂದು ಕನಸಿಗೆ ವಿಧಿ ವಿರಾಮ ಇಟ್ಟಿದೆ.

ಈಟಿವಿ ಭಾರತ ಮನವಿ...

ಎಷ್ಟೋ ಘಟನೆಗಳು ನಮಗೆ ಪಾಠ ಕಲಿಸುತ್ತಿವೆ. ಕೋವಿಡ್​ನಿಂದಾಗಿ ಅನೇಕರು ಅಕಾಲಿಕ ಮರಣ ಹೊಂದುತ್ತಿದ್ದಾರೆ. ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ. ಸಾಮಾಜಿಕ ಅಂತರ, ಸ್ಯಾನಿಟೈಸರ್​ ಬಳಕೆ ಮುಖ್ಯ. ಅನಗತ್ಯವಾಗಿ ಹೊರಗಡೆ ಬಂದು ಮತ್ತು ನಿರ್ಲಕ್ಷ್ಯ ತೋರುವುದರಿಂದ ಅಮೂಲ್ಯವಾದ ಪ್ರಾಣ ಕಳೆದುಕೊಳ್ಳುವ ಸಂಭವವಿರುತ್ತೆ. ಅಷ್ಟೇ ಅಲ್ಲ ನಿಮ್ಮನ್ನು ನಂಬಿ ಜೀವನ ಮಾಡುತ್ತಿರುವ ಕುಟುಂಬಸ್ಥರು ಸಹ ಬೀದಿಗೆ ಬರುವ ಸ್ಥಿತಿ ಎದುರಾಗಬಹುದು. ಹೀಗಾಗಿ ಕೊರೊನಾ ಬಗ್ಗೆ ಜಾಗೃತರಾಗಿರಿ.

Last Updated : May 7, 2021, 12:19 PM IST

ABOUT THE AUTHOR

...view details