ಕರ್ನಾಟಕ

karnataka

ETV Bharat / bharat

ಇಬ್ಬರು ಮಕ್ಕಳೊಂದಿಗೆ ಪತ್ನಿ ಜನ್ಮದಿನ ಆಚರಿಸಿ ಕೊಲೆ ಮಾಡಿದ ಗಂಡ.. ಆತ್ಮಹತ್ಯೆಗೆ ಶರಣಾದ ವ್ಯಕ್ತಿ! - ದುರ್ಗ್​ನಲ್ಲಿ ಪತ್ನಿ ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಗಂಡ

ಛತ್ತೀಸ್​ಗಢದ ದುರ್ಗ್ ಜಿಲ್ಲೆಯ ಉತೈ ಎಂಬಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ಸಂಚಲನ ಮೂಡಿಸಿದೆ. ವ್ಯಕ್ತಿ ಮೊದಲು ಮೊಬೈಲ್ ಕೇಬಲ್‌ನಿಂದ ಪತ್ನಿ ಮತ್ತು ಮಗನ ಕತ್ತು ಹಿಸುಕಿ ಕೊಲೆ ಮಾಡಿದರೆ, 2 ವರ್ಷದ ಮಗುವನ್ನು ತಲೆದಿಂಬು ಒತ್ತಿ ಕೊಂದಿದ್ದಾನೆ. ಬಳಿಕ ತಾನೂ ಕೂಡ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ.

ಇಬ್ಬರು ಮಕ್ಕಳೊಂದಿಗೆ ಪತ್ನಿ ಜನ್ಮದಿನ ಆಚರಿಸಿ ಕೊಲೆ ಮಾಡಿದ ಗಂಡ
ಇಬ್ಬರು ಮಕ್ಕಳೊಂದಿಗೆ ಪತ್ನಿ ಜನ್ಮದಿನ ಆಚರಿಸಿ ಕೊಲೆ ಮಾಡಿದ ಗಂಡ

By

Published : Jul 1, 2022, 12:45 PM IST

ದುರ್ಗ್ (ಛತ್ತೀಸ್‌ಗಢ): ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದುರ್ಗ್ ಜಿಲ್ಲೆಯ ಉತೈ ಪೊಲೀಸ್ ಠಾಣೆ ವ್ಯಾಪ್ತಿಯ ಉಮರ್ಪೋಟಿ ಗ್ರಾಮದಲ್ಲಿ ನಡೆದಿದೆ.

ಒಳಗಿನಿಂದ ಲಾಕ್​ ಆಗಿದ್ದ ಮನೆ:ಗುರುವಾರ ಸಂಜೆ ವ್ಯಕ್ತಿ ತನ್ನ ಮನೆಯನ್ನು ಒಳಗಿನಿಂದ ಲಾಕ್​ ಮಾಡಿಕೊಂಡಿದ್ದ. ಮನೆಯ ಬಾಗಿಲನ್ನು ಎಷ್ಟೇ ತಟ್ಟಿದರೂ ಬಾಗಿಲು ತೆರೆಯುತ್ತಿರಲಿಲ್ಲ. ಈ ಬಗ್ಗೆ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಬ್ಬಿಣದ ಬಾಗಿಲನ್ನು ಗ್ಯಾಸ್ ಕಟ್ಟರ್ ಮೂಲಕ ಕಟ್​ ಮಾಡಿ ತೆರೆದಾಗ ಒಳಗಿನ ದೃಶ್ಯ ಭಯಾನಕವಾಗಿತ್ತು. ಕೋಣೆಯಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿವೆ. ಅದರಲ್ಲಿ ಮೂವರು ಹಾಸಿಗೆಯ ಮೇಲೆ ಮಲಗಿದ್ದರೆ, ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಘಟನೆಯಿಂದ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಕೊಲೆಗೆ ದಿಂಬು, ಮೊಬೈಲ್ ಚಾರ್ಜರ್ ಬಳಕೆ: ಭೋಜರಾಜ್ ಸಾಹು ಪತ್ನಿ ಲಲಿತಾ ಹಾಗೂ ನಾಲ್ಕು ವರ್ಷದ ಮಗು ಪ್ರವೀಣ್ ಕುಮಾರ್ ಅವರನ್ನು ಮೊಬೈಲ್ ಚಾರ್ಜರ್​ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದರೆ. 2 ವರ್ಷದ ಡಿಕೆಶ್​ನ ಮುಖಕ್ಕೆ ದಿಂಬನ್ನು ಒತ್ತಿ ಕೊಲೆ ಮಾಡಲಾಗಿದೆ. ಆ ನಂತರ ಭೋಜರಾಜ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಓದಿ:ಹರ್ಷ ಹತ್ಯೆ ಪ್ರಕರಣ: NIA ತಂಡದಿಂದ 13 ಕಡೆ ದಾಳಿ, ಪರಿಶೀಲನೆ

ಕೋಣೆಯಲ್ಲಿ ನಾಲ್ಕು ಮೃತದೇಹ ಪತ್ತೆ: ಪಟಾಣ್ ಎಸ್‌ಡಿಒಪಿ ದೇವಾಂಶ್ ರಾಥೋಡ್ ಮಾತನಾಡಿ, ಗುರುವಾರ ಸಂಜೆ ಭೋಜರಾಜ್ ಸಾಹು ಬಗ್ಗೆ ಮಾಹಿತಿ ಸಿಕ್ಕಿತು. ಬಾಗಿಲನ್ನು ಗ್ಯಾಸ್ ಕಟ್ಟರ್​ನಿಂದ ಕತ್ತರಿಸಿ ಒಳಗೆ ಹೋದಾಗ ಹಾಸಿಗೆಯ ಮೇಲೆ ಪತ್ನಿ ಸೇರಿದಂತೆ ಇಬ್ಬರು ಮಕ್ಕಳ ಮೃತದೇಹಗಳು ಕಂಡಿದ್ದವು. ಭೋಜರಾಜ್ ಸಾಹು ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತದೇಹಗಳನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದರು.

ಬುಧವಾರ ಪತ್ನಿಯ ಹುಟ್ಟುಹಬ್ಬ ಆಚರಣೆ:ಮೃತ ಭೋಜರಾಜ್ ಸಾಹು ಅವರು ಬುಧವಾರ ತಮ್ಮ ಪತ್ನಿ ಲಲಿತಾ ಸಾಹು ಅವರ ಹುಟ್ಟುಹಬ್ಬವನ್ನು ಕುಟುಂಬ ಸದಸ್ಯರೊಂದಿಗೆ ಆಚರಿಸಿಕೊಂಡರು. ಅವರ ಅತ್ತಿ ಮನೆಯಿಂದ ಸಾಹು ಅವರ ನಾದಿನಿ ಸಹ ಬಂದಿದ್ದರು. ತನ್ನ ನಾದಿನಿಯನ್ನು ಮನೆಗೆ ಬಿಟ್ಟ ನಂತರ ಕರ್ತವ್ಯಕ್ಕೆ ಹೋಗಬೇಕಿತ್ತು. ಆದರೆ, ಅವರು ಡ್ಯೂಟಿಗೆ ಹೋಗದೇ ಸಂಜೆ ತಡವಾಗಿ ಮನೆಗೆ ಬಂದಿದ್ದಾರೆ. ಬಳಿಕ ಈ ಕೃತ್ಯ ಎಸಗಿದ್ದಾರೆ. ಭೋಜರಾಜ್ ಮತ್ತು ಲಲಿತಾ 2017ರಲ್ಲಿ ಮದುವೆಯಾಗಿದ್ದರು. ಗಂಡ-ಹೆಂಡತಿ ನಡುವೆ ಜಗಳವಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ABOUT THE AUTHOR

...view details