ಕರ್ನಾಟಕ

karnataka

ETV Bharat / bharat

ಮಾನವೀಯತೆ ಮರೆತ ಪತಿ: ಪತ್ನಿ ಮೇಲೆ ಸ್ಕ್ರೂ ಡ್ರೈವರ್‌ನಿಂದ ಹಲ್ಲೆ, ಮೂಗನ್ನೂ ಕಚ್ಚಿದ! - ಸಂತ್ರಸ್ತೆ ಪುಷ್ಪ

ಉತ್ತರ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಸ್ಕ್ರೂ ಡ್ರೈವರ್‌ನಿಂದ ಅಮಾನವೀಯವಾಗಿ ಹಲ್ಲೆ ಮಾಡಿದ್ದಾನೆ.

A husband who abused his wife
ಕೌಂಟುಬಿಕ ಕಾರಣಕ್ಕೆ ಹೆಂಡತಿ ಮೇಲೆ ದೌರ್ಜನ್ಯವೆಸಿಗಿದ ಪತಿ

By

Published : Jan 8, 2023, 2:29 PM IST

ನವದೆಹಲಿ: ಪತಿಯೊಬ್ಬ ತನ್ನ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉತ್ತರ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ಹೆಂಡತಿಯ ಮೇಲೆ ಕೋಪಗೊಂಡ ಪತಿ ಚೇತ್ರಂ ಸ್ವಲ್ಪವೂ ಮಾನವೀಯತೆ ತೋರದೆ ಹಲ್ಲೆ ಮಾಡಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ದುರುಳನ ಪತ್ನಿ ಸಂತ್ರಸ್ತೆ ಪುಷ್ಪಾ, ದೆಹಲಿಯ ಎಲ್ಎನ್ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪುಷ್ಪಾ ಕೆಲವು ವರ್ಷಗಳ ಹಿಂದೆ ಚೇತ್ರಂ ಎಂಬಾತನನ್ನು ವಿವಾಹವಾಗಿದ್ದರು. ಆದರೆ ಕೆಲವು ಕಾರಣಕ್ಕೆ ಆಕೆ ತನ್ನ ಕುಟುಂಬದೊಂದಿಗೆ ಜಹಾಂಗೀರ್‌ಪುರಿ ಡಿ ಬ್ಲಾಕ್‌ನಲ್ಲಿ ವಾಸಿಸಲು ಶುರು ಮಾಡಿದ್ದರು. ಈ ವಿಚಾರವಾಗಿ ದಂಪತಿಯ ನಡುವೆ ಜಗಳ ಆರಂಭವಾಗಿ ಪುಷ್ಪಾಗೆ ಪತಿ ವಿಪರೀತ ಕಿರುಕುಳ ನೀಡಲಾರಂಭಿಸಿದ್ದ. ಇದೇ ವಿಷಯ ಇಬ್ಬರ ನಡುವೆ ಗಲಾಟೆಗೆ ಕಾರಣವಾಗಿತ್ತು. ನಂತರ ಇದು ವಿಕೋಪಕ್ಕೆ ತಿರುಗಿ ಚೇತ್ರಂ ತನ್ನ ಹೆಂಡತಿ ಮೇಲೆ ಮೊದಲು ಸ್ಕ್ರೂಡ್ರೈವರ್‌ನಿಂದ ಮನಬಂದಂತೆ ಇರಿದು, ಖಾಸಗಿ ಭಾಗಗಳಿಗೂ ಗಾಯ ಮಾಡಿದ್ದಾನೆ. ಇಷ್ಟಾದರೂ ಶಾಂತನಾಗದ ಕ್ರೂರಿ ಪತಿ ಮತ್ತೆ ಪತ್ನಿಯ ಮೂಗನ್ನು ತನ್ನ ಹಲ್ಲಿನಿಂದ ಕಚ್ಚಿ ಗಂಭೀರ ಗಾಯಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ನಂತರ ಸಂತ್ರಸ್ತೆಯನ್ನು ಸಮೀಪದ ಬಾಬು ಜಗಜೀವನ್ ರಾಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ಚಿಕಿತ್ಸೆ ಮುಂದುವರಿದಿದ್ದು, ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಚೇತ್ರಂನ ಮೇಲೆ ಜಹಾಂಗೀರ್‌ಪುರಿ ಠಾಣೆ ಪೊಲೀಸರು ಎಫ್​ಐಆರ್​​ ದಾಖಲಿಸಿ, ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ತನ್ನ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ತಾಯಿಗೆ ಗುಂಡು ಹಾರಿಸಿದ ಬಾಲಕಿ!

ABOUT THE AUTHOR

...view details