ಮೊರೆನಾ(ಮಧ್ಯಪ್ರದೇಶ):ಪತ್ನಿ, 12 ವರ್ಷದ ಮಗ ಹಾಗೂ 10 ವರ್ಷದ ಮಗಳ ಕೊಲೆಗೈದು, ತಂದೆಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಪತ್ನಿ, ಮಗ, ಮಗಳ ಕೊಲೆಗೈದು ಆತ್ಮಹತ್ಯೆಗೆ ಶರಣಾದ ತಂದೆ! - ಆತ್ಮಹತ್ಯೆಗೆ ಶರಣಾದ ಪಾಪಿ ತಂದೆ
ತಂದೆಯೋರ್ವ ಪತ್ನಿ, ಮಗ ಹಾಗೂ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದು, ತದನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Murder
ಇಲ್ಲಿನ ಸಿವಿಲ್ ಲೈನ್ ಥಾಣಾ ಕ್ಷೇತ್ರದ ಸುಧಾಮ ನಗರ ಕಾಲೋನಿಯಲ್ಲಿ ಘಟನೆ ನಡೆದಿದೆ. ಇಂದು ಬೆಳಗ್ಗೆ ಅವರು ನಡೆಸುತ್ತಿದ್ದ ಅಂಗಡಿ ತೆರೆದಿರಲಿಲ್ಲ. ಹೀಗಾಗಿ ಸ್ಥಳೀಯರಿಗೆ ಅನುಮಾನ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಅವರು ವಾಸಿಸುತ್ತಿದ್ದ ಮನೆ ಬಾಗಿಲು ಮುರಿದು ಒಳಹೋಗಿ ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಸ್ಥಳೀಯರಿಗೆ ವೋಟ್ ಮಾಡಲು ಅವಕಾಶ ನೀಡ್ತಿಲ್ಲ: ರಾಜ್ಯಪಾಲರಿಗೆ ಫೋನಾಯಿಸಿದ ಮಮತಾ