ಕಾಮರೆಡ್ಡಿ: ತೆಲಂಗಾಣದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರಕ್ಕೂ ಜನರು ಹಿಂದೇಟು ಹಾಕುತ್ತಿದ್ದಾರೆ. ವೈರಸ್ ಹರಡುವ ಭೀತಿಯಿಂದ ಮೃತರ ಅಂತ್ಯಕ್ರಿಯೆಗೆ ಯಾರೂ ಮುಂದೆ ಬರುತ್ತಿಲ್ಲ. ಕಾಮರೆಡ್ಡಿ ಜಿಲ್ಲೆಯಲ್ಲಿ ಮಡದಿಯ ಶವ ಹೊತ್ತು ಪತಿ ಸಾಗಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಮಾನವೀಯತೆಗೆ ಕೊರೊನಾ ಸೋಂಕು: ಪತ್ನಿ ಶವ ಹೊತ್ತೊಯ್ದು ಅಂತ್ಯಕ್ರಿಯೆ ನೆರವೇರಿಸಿದ ಪತಿ - ವಿಡಿಯೋ
ಕಾಮರೆಡ್ಡಿಯಲ್ಲಿ ಬಹುದಿನಗಳಿಂದ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದ ನಾಗ ಲಕ್ಷ್ಮಿ ಎಂಬ ಮಹಿಳೆ ಭಾನುವಾರ ಸಂಜೆ ಕೊನೆಯುಸಿರೆಳೆದರು. ಆಕೆ ಕೊರೊನಾದಿಂದ ಮೃತಪಟ್ಟಿರಬಹುದೆಂದು ಭಾವಿಸಿದ ಜನರು ನಾಗ ಲಕ್ಷ್ಮಿಯ ಅಂತ್ಯಕ್ರಿಯೆ ಮಾಡಲು ಮುಂದೆ ಬರಲಿಲ್ಲ. ಮೃತಳ ಅಂತ್ಯಕ್ರಿಯೆಗಾಗಿ ರೈಲ್ವೆ ಪೊಲೀಸರು 2,500 ರೂ.ಗಳ ದೇಣಿಗೆ ಸಂಗ್ರಹಿಸಿ ಆ ಹಣವನ್ನು ಪತಿ ಸ್ವಾಮಿಗೆ ನೀಡಿದ್ದಾರೆ. ನಾಗಮಣಿಯ ಪತಿ ಸ್ವಾಮಿ ತನ್ನ ಹೆಂಡತಿಯ ದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಕಿಲೋಮೀಟರ್ ದೂರದಲ್ಲಿರುವ ಇಂದಿರಾನಗರ ಸ್ಮಶಾನಕ್ಕೆ ಹೊತ್ತೊಯ್ದು ಅಂತ್ಯಸಂಸ್ಕಾರ ನೆರವೇರಿಸಿದರು.
ಕಾಮರೆಡ್ಡಿಯಲ್ಲಿ ಬಹುದಿನಗಳಿಂದ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದ ನಾಗ ಲಕ್ಷ್ಮಿ ಎಂಬ ಮಹಿಳೆ ಭಾನುವಾರ ಸಂಜೆ ನಿಧನರಾದರು. ಆಕೆ ಕೊರೊನಾದಿಂದ ಮೃತಪಟ್ಟಿರಬಹುದೆಂದು ಭಾವಿಸಿದ ಜನರು ಆಕೆಯ ಅಂತ್ಯಕ್ರಿಯೆಗೂ ಮುಂದೆ ಬರಲಿಲ್ಲ.
ಶವವನ್ನು ಸ್ಮಶಾನಕ್ಕೆ ಹೊಯ್ಯಲು ಸಹ ಆಟೋ ಚಾಲಕರು ಮುಂದೆ ಬರಲಿಲ್ಲ. ಮೃತಳ ಅಂತ್ಯಕ್ರಿಯೆಗಾಗಿ ರೈಲ್ವೆ ಪೊಲೀಸರು 2,500 ರೂ.ಗಳ ದೇಣಿಗೆ ಸಂಗ್ರಹಿಸಿ ಆ ಹಣವನ್ನು ಆಕೆಯ ಪತಿ ಸ್ವಾಮಿಗೆ ನೀಡಿದ್ದಾರೆ. ನಾಗ ಲಕ್ಷ್ಮಿಯ ಪತಿ ಸ್ವಾಮಿ ತನ್ನ ಹೆಂಡತಿಯ ದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಕಿಲೋಮೀಟರ್ ದೂರದಲ್ಲಿರುವ ಇಂದಿರಾನಗರ ಸ್ಮಶಾನಕ್ಕೆ ಹೊತ್ತೊಯ್ದು ಅಂತ್ಯಸಂಸ್ಕಾರ ನೆರವೇರಿಸಿದರು.