ಕರ್ನಾಟಕ

karnataka

ETV Bharat / bharat

ವರದಕ್ಷಿಣೆಗಾಗಿ ಹೆಂಡತಿಯನ್ನು ಸುಟ್ಟು ಕೊಂದ ಪತಿ - ವರದಕ್ಷಿಣೆಗಾಗಿ ಹೆಂಡತಿಯನ್ನು ಸುಟ್ಟು ಕೊಂದ ಪತಿ

ಬಿಹಾರದ ನಾವಡದಲ್ಲಿ ವರದಕ್ಷಿಣೆಗಾಗಿ ಮಹಿಳೆಯನ್ನು ಸಜೀವ ದಹನ ಮಾಡಲಾಗಿದೆ. ವರದಕ್ಷಿಣೆಯಾಗಿ ತನ್ನ ಮತ್ತು ಅತ್ತೆಯಂದಿರಿಗೆ ಕಾರು ಮತ್ತು ಹಣ ನೀಡದಿದ್ದಕ್ಕಾಗಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಮೃತಳ ಸಹೋದರ ಮಹಿಳೆಯ ಪತಿ ಮತ್ತು ಅತ್ತೆಯ ಮೇಲೆ ಕೊಲೆ ಆರೋಪ ಮಾಡಿದ್ದಾರೆ..

husband-burns-wife-alive-for-dowry-in-nawada
ವರದಕ್ಷಿಣೆಗಾಗಿ ಹೆಂಡತಿಯನ್ನು ಸುಟ್ಟು ಕೊಂದ ಪತಿ

By

Published : Feb 20, 2022, 5:07 PM IST

ನಾವಡ :ಬಿಹಾರದ ನಾವಡದಲ್ಲಿ ವರದಕ್ಷಿಣೆಗಾಗಿ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಹಣ ಮತ್ತು ಸ್ಕಾರ್ಪಿಯೋ ಕಾರಿಗೆ ಆಕೆಯ ಗಂಡ ಮತ್ತು ಅತ್ತೆಯಂದಿರು ಸೇರಿ ಮಹಿಳೆಯನ್ನು ಜೀವಂತ ಸುಟ್ಟು ಹಾಕಿರುವ ಘಟನೆಯು ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾರತ್ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಕೋಮಲ್ ಕುಮಾರಿ ಎಂದು ಗುರುತಿಸಲಾಗಿದೆ.

ಅಡುಗೆ ಮಾಡುವಾಗ ಪ್ರೆಶರ್‌ ಕುಕ್ಕರ್‌ ಸ್ಫೋಟಗೊಂಡು ಕೋಮಲ್‌ ಸುಟ್ಟು ಕರಕಲಾಗಿರುವುದಾಗಿ ಅತ್ತೆಯ ಮನೆಯವರು ಮಹಿಳೆಯ ತಾಯಿಯ ಮನೆಗೆ ಸುದ್ದಿ ಮುಟ್ಟಿಸಿದ್ದು, ಬಳಿಕ ಆಕೆಯನ್ನು ತರಾತುರಿಯಲ್ಲಿ ಪಾವಾಪುರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾಳೆ.

ವರದಕ್ಷಿಣೆಗಾಗಿ ತನ್ನ ಸಹೋದರಿಯನ್ನು ಜೀವಂತ ಸುಟ್ಟು ಹಾಕಲಾಗಿದೆ ಎಂದು ಮೃತನ ಸಹೋದರ ಆರೋಪಿಸಿದ್ದಾನೆ. ಆರೋಪಿ ಅಳಿಯಂದಿರ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆಗೆ ಆಗ್ರಹಿಸಿದ್ದಾರೆ. ಮೃತ ಮಹಿಳೆಯ ಶವದ ಮರಣೋತ್ತರ ಪರೀಕ್ಷೆಯನ್ನು ಪಾವಾಪುರಿ ವಿಮ್ಸ್‌ನಲ್ಲಿ ನಡೆಸಲಾಗುತ್ತಿದೆ.

ಓದಿ :ರಣಜಿ ಟ್ರೋಫಿ : ಪದಾರ್ಪಣೆ ಪಂದ್ಯದಲ್ಲೇ 2 ಶತಕ ಸಿಡಿಸಿ ದಾಖಲೆ ಬರೆದ ಯಶ್​ ಧುಲ್​

ABOUT THE AUTHOR

...view details