ಪಂಢರಪುರ(ಮಹಾರಾಷ್ಟ್ರ): ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಮಗಳ ತಲೆಗೆ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಪಂಢರಪುರದ ಭಿಲರ್ವಾಡಿಯಲ್ಲಿ ನಡೆದಿದೆ. ಇಬ್ಬರು ರಾತ್ರಿ ಕೋಣೆಯಲ್ಲಿ ಮಗಲಿದ್ದಾಗ ಹಲ್ಲೆ ನಡೆಸಲಾಗಿದೆ.
ಘಟನೆಯಲ್ಲಿ ಮೃತರನ್ನ ಲಕ್ಷ್ಮಿ(30) ಹಾಗೂ ಶೃತಿ(12) ಎಂದು ಗುರುತಿಸಲಾಗಿದೆ. ಭಾಸ್ಕರ್ ಈ ಕೃತ್ಯವೆಸಗಿರುವುದಾಗಿ ವರದಿಯಾಗಿದೆ. ಈಗಾಗಲೇ ಆರೋಪಿಯನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಭಾಸ್ಕರ್ ತನ್ನ ಕುಟುಂಬದೊಂದಿಗೆ ಭಿಲರ್ವಾಡಿಯಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ ಪತ್ನಿ ಲಕ್ಷ್ಮಿ ಹಾಗೂ ಪುತ್ರಿ ಶೃತಿ ಒಂದು ಕೋಣೆಯಲ್ಲಿ ಮಲಗಿದ್ದರು. ಮತ್ತೊಂದು ಕೋಣೆಯಲ್ಲಿ ಪುತ್ರ ರೋಹಿತ್ ತನ್ನ ಅಜ್ಜಿ ಜೊತೆ ಮತ್ತೊಂದು ಕೋಣೆಯಲ್ಲಿ ಮಲಗಿದ್ದ.