ಶ್ರಾವಸ್ತಿ(ಉತ್ತರ ಪ್ರದೇಶ): 10 ರೂ.ಗೋಸ್ಕರ ಕಟ್ಟಿಕೊಂಡ ಹೆಂಡತಿ ಮೇಲೆ ಗಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗಿದೆ.
ಉತ್ತರ ಪ್ರದೇಶದ ಶ್ರಾವಸ್ತಿಯಲ್ಲಿ ಮಾನವೀಯತೆಗೆ ಮುಜುಗರ ತುರುವಂತಹ ಘಟನೆವೊಂದು ನಡೆದಿದ್ದು, ಗಂಡನೊಬ್ಬ ಕೈಯಲ್ಲಿ ಕೋಲು ಹಿಡಿದು ಹೆಂಡ್ತಿ ಮೇಲೆ ಪ್ರಾಣಿಗಳ ಮೇಲೆ ಹಲ್ಲೆ ನಡೆಸುವ ರೀತಿ ದಾಳಿ ಮಾಡಿದ್ದಾನೆ. ಈ ವೇಳೆ, ಮಕ್ಕಳು ಕಿರುಚುತ್ತಾ ಬೇಡಿಕೊಂಡರೂ ಆತ ಸುಮ್ಮನಾಗಿಲ್ಲ.