ಚೆನ್ನೈ(ತಮಿಳುನಾಡು):33 ವರ್ಷದ ಸಾಫ್ಟವೇರ್ ಗಂಡನೋರ್ವ ಹೆಂಡತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಆನ್ಲೈನ್ ಮ್ಯಾಟ್ರಿಮೊನಿಯಲ್ ಸೈಟ್ನಲ್ಲಿ ಹೆಂಡತಿ ಪ್ರೊಫೈಲ್ ಕ್ರಿಯೆಟ್ ಮಾಡಿ, ಇದೀಗ ಬಂಧನಕ್ಕೊಳಗಾಗಿರುವ ಘಟನೆ ನಡೆದಿದೆ.
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 26 ವರ್ಷದ ಪತ್ನಿಯ ಹೆಸರಿನಲ್ಲಿ ಮ್ಯಾಟ್ರಿಮೊನಿಯಲ್ ಸೈಟ್ನಲ್ಲಿ ಪ್ರೊಫೈಲ್ ಕ್ರಿಯೆಟ್ ಮಾಡಿದ್ದು, ಆಕೆಗೆ ಬೇರೆ ಗಂಡ ಸಿಕ್ಕರೆ ತಾನು, ಡಿವೋರ್ಸ್ ಪಡೆದುಕೊಳ್ಳಬಹುದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿದು ಬಂದಿದೆ.
ಬಂಧಿತ ವ್ಯಕ್ತಿಯನ್ನ ಎಸ್. ಓಂ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ವೆಳ್ಳಿಯೂರು ಗ್ರಾಮದವರಾಗಿದ್ದು, ಸಾಫ್ಟವೇರ್ ಇಂಜಿನಿಯರ್ ಆಗಿದ್ದಾರೆ. ಕೆಲ ವರ್ಷಗಳ ಹಿಂದೆ ಅದೇ ಗ್ರಾಮದ ಯುವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ದಂಪತಿ ವಿದೇಶಕ್ಕೆ ತೆರಳಿದ್ದರು. ದುರದೃಷ್ಟವಶಾತ್, ಮದುವೆಯಾದ ಒಂದು ವರ್ಷದ ನಂತರ ಇಬ್ಬರಲ್ಲಿ ಭಿನ್ನಾಭಿಪ್ರಾಯ ಹುಟ್ಟಿಕೊಂಡಿವೆ. ಜೊತೆಗೆ ಕೆಲಸ ಬಿಟ್ಟು ಸ್ವದೇಶಕ್ಕೆ ಬಂದಿದ್ದು, ಹೆಂಡತಿ ವಿದೇಶದಲ್ಲಿ ಉಳಿದುಕೊಂಡಿದ್ದಳು.
ಇದನ್ನೂ ಓದಿರಿ:ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಟ್ರೈನಿ IASನಿಂದ ಯುವತಿಗೆ ಲೈಂಗಿಕ ದೌರ್ಜನ್ಯ!?
ಸೆ. 17ರಂದು ಓಂ ಕುಮಾರ್ ಪತ್ನಿಯ ತಂದೆ ಪದ್ಮನಾಭನ್ಗೆ ಮೇಲಿಂದ ಮೇಲೆ ಫೋನ್ ಕಾಲ್ಗಳು ಬರಲು ಶುರುವಾಗಿವೆ. ಈ ವೇಳೆ, ತಮ್ಮ ಮಗಳ ಹೆಸರಿನಲ್ಲಿ ಮ್ಯಾಟ್ರಿಮೊನಿಯಲ್ನಲ್ಲಿ ಅಕೌಂಟ್ ಕ್ರಿಯೆಟ್ ಆಗಿರುವುದಾಗಿ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ತಿರುವಳ್ಳೂರು ಸೈಬರ್ ಸೆಲ್ನಲ್ಲಿ ದೂರು ದಾಖಲು ಮಾಡಿದ್ದರು. ತನಿಖೆ ನಡೆಸಿದ ಪೊಲೀಸರು ಓಂ ಕುಮಾರ್ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.