ಶಿರಡಿ(ಮಹಾರಾಷ್ಟ್ರ):ಮಹಾರಾಷ್ಟ್ರದ ಶಿರಡಿಯ ಕೊರ್ಹಲೆ ಗ್ರಾಮದಲ್ಲಿ ದಂಪತಿಗಳನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಯಾವ ಕಾರಣಕ್ಕಾಗಿ ಈ ಪ್ರಕರಣ ನಡೆದಿದೆ ಎಂಬ ಮಾಹಿತಿ ಮಾತ್ರ ಹೊರ ಬಿದ್ದಿಲ್ಲ.
ಕೊಲೆಯಾಗಿರುವ ದುರ್ದೈವಿಗಳನ್ನ ಶಶಿಕಾಂತ್ ಶ್ರೀಧರ್(60) ಹಾಗೂ ಸಿಂಧೂಭಾಯ್ ಶಶಿಕಾಂತ್(55) ಎಂದು ಗುರುತಿಸಲಾಗಿದೆ. ಘಟನೆಗೆ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.