ಹನುಮಕೊಂಡ(ತೆಲಂಗಾಣ):ಮಗ ಮತ್ತು ಗಂಡ ಆಕೆಯ ಕೋಟ್ಯಂತರ ರೂಪಾಯಿ ಆಸ್ತಿ ಮೇಲೆ ಕಣ್ಣಾಕಿದ್ದಾರೆ. ಆಸ್ತಿ ಲಪಟಾಯಿಸಲು ಇಬ್ಬರು ಯೋಜನೆ ರೂಪಿಸಿದ್ದಾರೆ. ಬಳಿಕ ಮಹಿಳೆ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆದು, ಇದ್ದ ಆಸ್ತಿಯೆಲ್ಲವೂ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿರುವ ಘಟನೆ ಹನುಮಕೊಂಡ ಜಿಲ್ಲೆಯಲ್ಲಿ ಕಂಡು ಬಂದಿದೆ.
ಹನುಮಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ 46 ವರ್ಷದ ಮಹಿಳೆಗೆ ಪತಿ ಹಾಗೂ ಒಬ್ಬ ಪುತ್ರ ಇದ್ದಾರೆ. ಮಗ ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾನೆ. ಮದುವೆಯ ಸಂದರ್ಭದಲ್ಲಿ ಆಕೆಯ ತಂದೆ ವರದಕ್ಷಿಣೆಯಾಗಿ ನೀಡಿದ್ದರು. ಈಗ ಆ ಆಸ್ತಿ ಪ್ರಸ್ತುತ ಮಾರುಕಟ್ಟೆಯಲ್ಲಿ ಸುಮಾರು 15 ಕೋಟಿಗೆ ಬೆಲೆ ಬಾಳುತ್ತದೆ.
ಪತಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿ ಆಕೆಯನ್ನು ದೂರ ಮಾಡಲು ಯತ್ನಿಸಿದ್ದಾನೆ. ಈ ಕ್ರಮದಲ್ಲಿ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ತನ್ನ ಪತ್ನಿಗೆ ಪತಿ ಕಿರುಕುಳ ನೀಡಿದ್ದಾನೆ. ಮಗನಿಗೂ ಆಸ್ತಿ ಪಾಲು ನೀಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಮಹಿಳೆ ಒಪ್ಪಲಿಲ್ಲ.
ಆಸ್ತಿಗಾಗಿ ಗಂಡ - ಮಗನ ವರ್ಷಾನುಗಟ್ಟಲೆ ಕಿರುಕುಳದಿಂದ ಮಹಿಳೆ ತನ್ನ ಬುದ್ಧಿ ಭ್ರಮಣೆಯಾಗಿದೆ. ಅವರು ಸತ್ತರೆ ಮಾತ್ರ ಆಸ್ತಿ ನಮ್ಮ ಪಾಲು ಸಿಗುತ್ತೆ ಎಂದು ತಿಳಿದ ಅವರಿಬ್ಬರು ಯೋಜನೆವೊಂದನ್ನು ರೂಪಿಸಿದ್ದರು. 2017 ರಲ್ಲಿ ಒಂದು ದಿನ ಇಬ್ಬರೂ ಮಹಿಳೆಯನ್ನು ರೈಲಿನಲ್ಲಿ ಹತ್ತಿಸಿ ಕಳುಹಿಸಿದ್ದಾರೆ. ಅವರು ಕಾಣೆಯಾಗಿದ್ದಾರೆ ಎಂದು ಸಂಬಂಧಿಕರು ನಂಬಿದ್ದರು. ಪತಿ ಬೇರೆ ಮಹಿಳೆಯೊಂದಿಗೆ ವಿದೇಶಕ್ಕೆ ತೆರಳಿದ್ದರು. ಕೆಲಕಾಲದ ಬಳಿಕ ಬಂಧುಗಳೂ ಸಹ ಇದನ್ನು ಮರೆತಿದ್ದರು.
ರೈಲು ಹತ್ತಿದ್ದ ಮಹಿಳೆ ತಲುಪಿದ್ದೆಲ್ಲಿಗೆ?:ರೈಲು ಹತ್ತಿದ ಆ ಮಹಿಳೆ ಕೆಲವು ದಿನಗಳ ನಂತರ ಚೆನ್ನೈ ತಲುಪಿದ್ದಾರೆ. ಅಲ್ಲಿನ ರೈಲ್ವೆ ಪೊಲೀಸರ ನೆರವಿನಿಂದ ಅನ್ಬಗಂ ಪುನರ್ವಸತಿ ಕೇಂದ್ರ ಎಂಬ ದತ್ತಿ ಸಂಸ್ಥೆಯಲ್ಲಿ ಆ ತಾಯಿಗೆ ಆಶ್ರಯ ಸಿಕ್ಕಿದೆ. ಮಾನಸಿಕವಾಗಿ ಕುಗ್ಗಿದ ಆಕೆ ತನ್ನ ಹಳೆಯ ನೆನಪುಗಳನ್ನು ಮರೆತಿದ್ದಾರೆ. ಚಾರಿಟಿಯ ಸಂಘಟಕರು ಅವರಿಗೆ ಆಶ್ರಯ ನೀಡಿ, ಉಪಚರಿಸಿ, ಅವರಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದಾರೆ. ಆದರೆ, ಮಹಿಳೆಗೆ ಹಿಂದಿನದನ್ನು ನೆನಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.