ಗಯಾ (ಬಿಹಾರ):ಟಿಬೆಟ್ ಧರ್ಮಗುರು ದಲೈಲಾಮಾ ಅವರ ವಿರುದ್ಧ ಬಿಹಾರದಲ್ಲಿ ಗೂಢಾಚಾರಿಕೆ ನಡೆಸುತ್ತಿರುವ ಚೀನಿ ಮಹಿಳೆಗಾಗಿ ಗುಪ್ತಚರ ದಳಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಇದರ ಭಾಗವಾಗಿ ಮಹಿಳೆಯ ರೇಖಾಚಿತ್ರವನ್ನು ಚಿತ್ರಿಸಿ ಬಿಡುಗಡೆ ಮಾಡಲಾಗಿದೆ.
ಜೀವ ಬೆದರಿಕೆ ಹಿನ್ನೆಲೆ ಬಿಹಾರದ ಗಯಾದಲ್ಲಿ ಆಶ್ರಯ ಪಡೆದಿರುವ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರ ಚಲನವಲನಗಳ ಮೇಲೆ ಕಣ್ಣಿಡಲು ಚೀನಾ ಮಹಿಳೆಯೊಬ್ಬಳನ್ನು ಗೂಢಾಚಾರಿಕೆಗೆ ಕಳುಹಿಸಲಾಗಿದೆ ಎಂದು ಶಂಕಿಸಲಾಗಿದೆ. ದಲೈಲಾಮಾ ಅವರಿಗೆ ಸರ್ಕಾರ ಬಿಗಿ ಭದ್ರತೆ ನೀಡಿದೆ. ಗೂಢಾಚಾರಿಕೆಯ ಶಂಕೆಯ ಮೇಲೆ ಚೀನಿ ಮಹಿಳೆಯ ಪತ್ತೆಗಾಗಿ ಕೇಂದ್ರ ಭದ್ರತಾ ಮತ್ತು ಗುಪ್ತಚರ ದಳ ಪತ್ತೆ ಕಾರ್ಯ ಆರಂಭಿಸಿದೆ.