ಕರ್ನಾಟಕ

karnataka

ETV Bharat / bharat

ಹೆಂಡ್ತಿ ಭೇಟಿಗೆ ಆಗ್ರಹಿಸಿ ತಿಹಾರ್‌ ಜೈಲಲ್ಲಿ 50 ದಿನಗಳಿಂದ ಉಪವಾಸ.. ಕೈದಿ ಸುಕೇಶ್​ ಆಸ್ಪತ್ರೆಗೆ ದಾಖಲು - ಪತ್ನಿ ಲೀನಾ ಮರಿಯಾ ಪೌಲ್

ಪತ್ನಿ ಲೀನಾ ಮರಿಯಾ ಪೌಲ್​ರನ್ನು ಭೇಟಿಯಾಗಲು ಆಗ್ರಹಿಸಿ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಂಚಕ ಸುಕೇಶ್​ ಚಂದ್ರಶೇಖರ್​ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ.

hunger strike in tihar jail
hunger strike in tihar jail

By

Published : Jun 11, 2022, 4:11 PM IST

ನವದೆಹಲಿ: ವಂಚನೆ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸುಕೇಶ್​​ ಚಂದ್ರಶೇಖರ್ ಅದೇ ಜೈಲಿನಲ್ಲಿರುವ​ ಹೆಂಡತಿಯನ್ನ ಭೇಟಿಯಾಗಲು ಕಳೆದ 50 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿರುವ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. 200 ಕೋಟಿ ರೂಪಾಯಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ವಂಚಕ ಸುಕೇಶ್ ಚಂದ್ರಶೇಖರ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪತ್ನಿ ಲೀನಾ ಮರಿಯಾ ಪೌಲ್​ರನ್ನು ಪ್ರತಿ ವಾರ ಭೇಟಿಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ.

ಹೆಂಡ್ತಿ ಭೇಟಿಗೆ ಆಗ್ರಹಿಸಿ ತಿಹಾರ್‌ ಜೈಲಲ್ಲಿ 50 ದಿನಗಳಿಂದ ವಂಚಕ ಉಪವಾಸ

ಇದನ್ನೂ ಓದಿ:ಕುಟುಂಬದ ಎಲ್ಲ ಸದಸ್ಯರು ಸಾಮೂಹಿಕ ಆತ್ಮಹತ್ಯೆ.. ಅದೃಷ್ಟವಶಾತ್​ ಬದುಕುಳಿದ ಬಾಲಕಿ

ಕೈದಿಯ ಬೇಡಿಕೆ ನ್ಯಾಯ ಸಮ್ಮತವಲ್ಲ, ಇದು ಜೈಲಿನ ಕಾನೂನುಗಳಿಗೆ ವಿರೋಧವಾಗಿದೆ ಎಂದು ಅಧಿಕಾರಿಗಳು ಈಗಾಗಲೇ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರ ಹೊರತಾಗಿ ಕೂಡ ಸುಕೇಶ್​ ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದು, ಸಂಪೂರ್ಣವಾಗಿ ನಿಶಕ್ತರಾಗಿರುವ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ತಿಹಾರ್ ಜೈಲಿನಲ್ಲಿ ಸುಕೇಶ್​ ಚಂದ್ರಶೇಖರ್​​ ಶಿಕ್ಷೆ ಅನುಭವಿಸುತ್ತಿದ್ದು, ಅವರ ಪತ್ನಿ ಲೀನಾ ಕೂಡ ಅದೇ ಜೈಲಿನ ಮಹಿಳಾ ವಿಭಾಗದ ಕೈದಿಯಾಗಿದ್ದಾರೆ. ಪ್ರತಿ ವಾರ ತನ್ನ ಹೆಂಡತಿ ಲೀನಾ ಮರಿಯಾ ತನ್ನನ್ನ ಭೇಟಿಯಾಗಬೇಕೆಂದು ಸುಕೇಶ್​ ಜೈಲರ್​​ಗಳ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಸುಕೇಶ್​ ಏಪ್ರಿಲ್ 23 ರಿಂದ ಮೇ 2 ರವರೆಗೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಮೇ 3ರ ರಾತ್ರಿ ಊಟ ಮಾಡಿದ್ದಾರೆ. ಆದರೆ, ಮೇ 4 ರಿಂದ ಮತ್ತೆ ತಮ್ಮ ಉಪವಾಸ ಶುರು ಮಾಡಿದ್ದಾರೆ. ಈಗ ಅವರಿಗೆ ಸಲೈನ್​ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details