ಚೆನ್ನೈ:ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲೊಂದಾದ ಇಂಡಿಗೋದ ಶೇ.55 ರಷ್ಟು ವಿಮಾನಗಳು ಶನಿವಾರ(ಜುಲೈ 2) ಕಾರ್ಯನಿರ್ವಹಿಸಿಲ್ಲ. ಇದರಿಂದ ಸಾವಿರಾರು ಪ್ರಯಾಣಿಕರು ಪರದಾಡಬೇಕಾಯಿತು. ಇದಕ್ಕೆ ಪ್ರಮುಖ ಕಾರಣ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ!.
ಹೌದು, ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಶನಿವಾರ ಸಿಬ್ಬಂದಿ ನೇಮಕಾತಿ ಪರೀಕ್ಷೆ ನಡೆಸಿದ್ದು, ಅದರಲ್ಲಿ ಹಾಜರಾಗಲು ಇಂಡಿಗೋದ ಸಿಬ್ಬಂದಿ ಅನಾರೋಗ್ಯ ಸಮಸ್ಯೆ ನೀಡಿ ಸೇವೆಯಿಂದ ಗೈರಾಗಿದ್ದಾರೆ. ಇದರಿಂದ ಶೇ.55 ರಷ್ಟು ವಿಮಾನಗಳು ತಡವಾಗಿ ಕಾರ್ಯನಿರ್ವಹಿಸಿವೆ.
ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಇಂಡಿಗೊ ಏರ್‌ಲೈನ್ಸ್ ತನ್ನ ಶೇಕಡಾ 45.2 ರಷ್ಟು ವಿಮಾನಗಳನ್ನು ಮಾತ್ರ ಸಮಯಕ್ಕೆ ಸರಿಯಾಗಿ ಹಾರಾಟ ನಡೆಸಿದೆ ಎಂದು ತಿಳಿಸಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಈ ಬಗ್ಗೆ ಇಂಡಿಗೋ ಸಂಸ್ಥೆಯಿಂದ ವಿಮಾನಯಾನ ಸಚಿವಾಲಯ ವಿವರಣೆ ಕೋರಿದೆ. ಘಟನೆಯ ಬಳಿಕ ಇಂಡಿಗೋ ಮತ್ತು ಏರ್ ಇಂಡಿಯಾ ಏರ್‌ಲೈನ್ಸ್ ಯಾವುದೇ ಹೇಳಿಕೆಯನ್ನು ಈವರೆಗೂ ನೀಡಿಲ್ಲ.
ಕುತೂಹಲಕರ ಸಂಗತಿಯೆಂದರೆ ಇಂಡಿಗೋ ವಿಮಾನಗಳು ಶೇ.50ರಷ್ಟು ಹಾರಾಟ ನಿಲ್ಲಿಸಿದ್ದರೂ ಅದರ ವಿರುದ್ಧ ಬಂದ ದೂರುಗಳು ಮಾತ್ರ ಕೇವಲ 6 ಮಾತ್ರ.
ಇದನ್ನೂ ಓದಿ:ಒಂದೂವರೆ ತಿಂಗಳಿಂದ ಪೆಟ್ರೋಲ್-ಡೀಸೆಲ್ ಯಥಾಸ್ಥಿತಿ; ಇಂದಿನ ದರ ಚೆಕ್ ಮಾಡಿ