ಲೂಧಿಯಾನ (ಪಂಜಾಬ್): ಆಮ್ ಆದ್ಮಿ ಪಕ್ಷವು ಪಂಜಾಬ್ನಲ್ಲಿ ಅಧಿಕಾರಕ್ಕೆ ಬರುವ ಮುನ್ನ ಜನರಿಗೆ ಹಲವು ಭರವಸೆಗಳನ್ನು ನೀಡಿತ್ತು. ಈ ಪೈಕಿ ಮಹಿಳೆಯರಿಗೆ ಒಂದು ಸಾವಿರ ರೂ. ರೂಪಾಯಿ ಪಿಂಚಣಿ ನೀಡುವ ಭರವಸೆಯೂ ಒಂದಾಗಿದೆ. ಆದರೆ, ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಆಮ್ ಆದ್ಮಿ ಪಕ್ಷ ಈ ಭರವಸೆ ಈಡೇರಿಸಿಲ್ಲ. ಹೀಗಾಗಿಯೇ ಹಾಸ್ಯಗಾರ ಮತ್ತು ಸಮಾಜ ಸೇವಕ ಟಿಟು ಬನಿಯಾ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಆಮ್ ಆದ್ಮಿ ಪಕ್ಷದ ಸರ್ಕಾರ ಮಹಿಳೆಯರಿಗೆ ನೀಡಿದ ಭರವಸೆಯನ್ನು ಇನ್ನೂ ಈಡೇರಿಸಿಲ್ಲ. ಒಂದು ಸಾವಿರ ರೂಪಾಯಿ ಹಣವನ್ನು ಮಹಿಳೆಯರ ಖಾತೆಗೆ ಹಾಕಿಲ್ಲ. ಆದರೆ, ಶಾಸಕರ ಪತ್ನಿಯರಿಗೆ ಒಂದು ಸಾವಿರ ರೂಪಾಯಿ ಪಿಂಚಣಿ ನೀಡಲು ಸಿದ್ಧವಾಗಿದೆ. ಹಾಗಾಗಿ ಪಿಂಚಣಿ ಪಡೆಯಬೇಕಾದರೆ ಶಾಸಕರ ಸಂಬಂಧಿಕರೆಂಬ ಗುರುತಿನ ಚೀಟಿ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟಿಟು ಬನಿಯಾ ಸರ್ಕಾರದ ಮಾಡಿದ್ದ ಘೋಷಣೆ ಪತ್ರಗಳನ್ನು ಪ್ರದರ್ಶಿಸುತ್ತಾ ಟೀಕಿದ್ದಾರೆ.