ಸೋಜತ್ ರೋಡ್ (ರಾಜಸ್ಥಾನ) :ಲಾಕ್ಡೌನ್ ವೇಳೆ ಮದುವೆಯೊಂದಕ್ಕೆ ತೆರಳಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮಾನವೀಯತೆ ಮೆರೆದಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯ ಸೋಜತ್‌ರೋಡ್ ನಗರದಲ್ಲಿ ನಡೆದಿದೆ.
ಸೋಜತ್‌ರೋಡ್ ಪೊಲೀಸ್ ಠಾಣೆಯಲ್ಲಿ ಸ್ವಚ್ಛಗೊಳಿಸುವ ಕೆಲಸ ಮಾಡುವ ರಮೇಶ್ ತನ್ನ ಮಗಳಿಗೆ ಮದುವೆ ಮಾಡುತ್ತಿದ್ದು, ಲಾಕ್ಡೌನ್ ವೇಳೆ ಸಂಕಷ್ಟ ಎದುರಿಸುತ್ತಿದ್ದರು.
ಈ ವೇಳೆ ಅಲ್ಲಿಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿ ಸೀಮಾ ಜಾಕರ್ ಮತ್ತು ಇತರ ಸಿಬ್ಬಂದಿ ವಧು-ವರರಿಗೆ ಆಶೀರ್ವಾದ ಮಾಡಿದ್ದಲ್ಲದೇ 51 ಸಾವಿರ ರೂ. ನಗದು ನೀಡಿ ಸಹಕರಿಸಿದ್ದಾರೆ.