ಸಂಗ್ರೂರ್ (ಪಂಜಾಬ್) :ಪಂಜಾಬ್‌ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಶಿರೋಮಣಿ ಅಕಾಲಿದಳ (ಅಮೃತಸರ) ನಾಯಕ ಸಿಮ್ರಂಜಿತ್ ಸಿಂಗ್ ಮಾನ್ ಇಂದು ಸಿಎಂ ತವರು ಕ್ಷೇತ್ರವಾದ ಸಂಗ್ರೂರ್ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಇದು ನಮ್ಮ ಪಕ್ಷಕ್ಕೆ ದೊಡ್ಡ ಗೆಲುವು. ಈ ಉಪಚುನಾವಣೆಯಲ್ಲಿ ನಾವು ಎಲ್ಲಾ ರಾಷ್ಟ್ರೀಯ ಪಕ್ಷಗಳನ್ನು ಸೋಲಿಸಿದ್ದೇವೆ. ಸಾಲದಲ್ಲಿರುವ ರೈತರ ಸ್ಥಿತಿ ಸೇರಿದಂತೆ ಸಂಗ್ರೂರಿನ ಕಳಪೆ ಆರ್ಥಿಕ ಸ್ಥಿತಿಯ ವಿಷಯವನ್ನು ಪ್ರಸ್ತಾಪಿಸುವುದು ನನ್ನ ಆದ್ಯತೆಯಾಗಿದೆ. ನಾವು ಪಂಜಾಬ್ ಸರ್ಕಾರದೊಂದಿಗೆ ಕೆಲಸ ಮಾಡುತ್ತೇವೆ ಎಂದು ಸಿಮ್ರಂಜಿತ್ ಸಿಂಗ್ ಮಾನ್ ಹೇಳಿದರು.
ಸಂಸತ್ತಿನಲ್ಲಿ ನನ್ನನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದಕ್ಕಾಗಿ ಸಂಗ್ರೂರಿನ ನಮ್ಮ ಮತದಾರರಿಗೆ ನಾನು ಆಭಾರಿಯಾಗಿದ್ದೇನೆ. ನಮ್ಮ ರೈತರು, ಕೃಷಿ ಕಾರ್ಮಿಕರು, ವ್ಯಾಪಾರಿಗಳು ಮತ್ತು ನನ್ನ ಕ್ಷೇತ್ರದ ಪ್ರತಿಯೊಬ್ಬರ ಸಂಕಷ್ಟಗಳನ್ನು ನಿವಾರಿಸಲು ನಾನು ಶ್ರಮಿಸುತ್ತೇನೆ ಎಂದು ಇದೇ ವೇಳೆ ತಿಳಿಸಿದರು.
ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರು ಮಾನ್ ಅವರನ್ನು ಅಭಿನಂದಿಸುತ್ತ, ಸಂಗ್ರೂರ್ ಸಂಸದೀಯ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆದ್ದಿದ್ದಕ್ಕಾಗಿ ಅವರಿಗೆ ಶುಭಾಶಯ. ಅವರಿಗೆ ಎಲ್ಲಾ ರೀತಿಯ ಎಲ್ಲಾ ಸಹಕಾರವನ್ನು ನೀಡುತ್ತೇನೆ. ನಾವು ಜನಾದೇಶಕ್ಕೆ ತಲೆಬಾಗುತ್ತೇವೆ ಎಂದಿದ್ದಾರೆ.