ಕರ್ನಾಟಕ

karnataka

ETV Bharat / bharat

ಸ್ಪೋರ್ಟ್ಸ್ ಶಾಪಿಂಗ್ ಮಾಲ್​ನಲ್ಲಿ ಭಾರಿ ಅಗ್ನಿ ಅವಘಡ: ಇತರ ಕಟ್ಟಡಗಳಿಗೆ ವ್ಯಾಪಿಸಿದ ಬೆಂಕಿ

ತೆಲಂಗಾಣದ ಸಿಕಂದರಾಬಾದ್​ನಲ್ಲಿ ಭಾರಿ ಅಗ್ನಿ ಅವಘಡ ಉಂಟಾಗಿದೆ. ಸ್ಪೋರ್ಟ್ಸ್ ಶಾಪಿಂಗ್ ಮಾಲ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇತರ ಎರಡು ಕಟ್ಟಡಗಳಿಗೆ ಬೆಂಕಿ ವ್ಯಾಪಿಸಿದೆ.

huge-fire-breaks-out-in-multi-storied-building-in-secunderabad
ಸ್ಪೋರ್ಟ್ಸ್ ಶಾಪಿಂಗ್ ಮಾಲ್​ನಲ್ಲಿ ಭಾರಿ ಅಗ್ನಿ ಅವಘಡ: ಇತರ ಕಟ್ಟಡಗಳಿಗೆ ವ್ಯಾಪಿಸಿದ ಬೆಂಕಿ

By

Published : Jan 19, 2023, 4:41 PM IST

ಸಿಕಂದರಾಬಾದ್‌(ತೆಲಂಗಾಣ): ಬಹುಮಹಡಿ ಕಟ್ಟಡದ ಶಾಪಿಂಗ್ ಮಾಲ್‌ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ, ಇಬ್ಬರು ಸಿಲುಕಿರುವ ಘಟನೆ ತೆಲಂಗಾಣದ ಸಿಕಂದರಾಬಾದ್​ನಲ್ಲಿ ನಡೆದಿದೆ. ಈ ಕಟ್ಟಡದಲ್ಲಿ ಕಾಣಿಸಿಕೊಂಡು ಬೆಂಕಿಯು ಅಕ್ಕ-ಪಕ್ಕದ ಮತ್ತೆ ಎರಡು ಕಟ್ಟಡಗಳಿಗೂ ವ್ಯಾಪಿಸಿದೆ. ಇದರಿಂದ ಕಳೆದ ನಾಲ್ಕೈದು ಗಂಟೆಗಳಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುವಂತಾಗಿದೆ.

ಇದನ್ನೂ ಓದಿ:ಮುಂಬೈ-ಗೋವಾ ಹೆದ್ದಾರಿಯಲ್ಲಿ ಟ್ರಕ್‌-ವ್ಯಾನ್‌ ಅಪಘಾತ; ಮಗು ಸೇರಿ 9 ಮಂದಿ ಸಾವು

ಇಲ್ಲಿನ ರಾಮ್‌ಗೋಪಾಲ್‌ಪೇಟೆ ಪ್ರದೇಶದ ನಲ್ಲಗುಟ್ಟದಲ್ಲಿರುವ ಆರು ಅಂತಸ್ತಿನ ಡೆಕ್ಕನ್ ನೈಟ್‌ವೇರ್ ಸ್ಪೋರ್ಟ್ಸ್ ಸ್ಟೋರ್​ ಕಟ್ಟಡದಲ್ಲಿ ಮೊದಲ ಬೆಂಕಿ ಹೊತ್ತಿಕೊಂಡಿದೆ. ಈ ವಿಷಯ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಬೆಂಕಿಯಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲೂ ದಟ್ಟ ಹೊಗೆ ಆವರಿಸಿದೆ. ಅಲ್ಲದೇ, ಕಟ್ಟಡದಲ್ಲಿ ಹೊಗೆ ಹೆಚ್ಚುತ್ತಲೇ ಇರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ.

ಅಗ್ನಿಶಾಮಕ ಸಿಬ್ಬಂದಿ ಅಸ್ವಸ್ಥ:ಇದರ ನಡುವೆ ಕಟ್ಟಡದಲ್ಲಿ ಸಿಲುಕಿದ್ದ ಐವರನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ. ಆದರೆ, ಇನ್ನಿಬ್ಬರು ಸಹ ಕಟ್ಟಡದಲ್ಲೇ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಜೊತೆಗೆ ಭಾರಿ ಬೆಂಕಿ ಮತ್ತು ಹೊಗೆ ಬರುತ್ತಿದ್ದರಿಂದ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ ಬೆಂಕಿಯು ಅಕ್ಕಪಕ್ಕದ ಎರಡು ಕಟ್ಟಡಗಳಿಗೂ ವ್ಯಾಪಿಸಿದೆ.

ಇದನ್ನೂ ಓದಿ:ಗುಡಿಸಲಿಗೆ ಬೆಂಕಿ ತಗುಲಿ ಅಪ್ಪ - ಮಗಳು ಸಜೀವ ದಹನ

ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ, ಸ್ಥಳೀಯ ನಿವಾಸಿಗಳು ಸಹ ಭಯಭೀತಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕಟ್ಟಡದ ಅಕ್ಕಪಕ್ಕದ ಮನೆಗಳ ನಿವಾಸಿಗಳನ್ನು ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ. ಬೆಂಕಿ ಮತ್ತು ಹೊಗೆ ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಮೊದಲಿಗೆ ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ತರಲಾಗಿತ್ತು.

ಸ್ಥಳಕ್ಕೆ ಸಚಿವರ ದೌಡು:ನಿಯಂತ್ರಿಸಲು ಸಾಧ್ಯವಾಗದ ಕಾರಣ ಮತ್ತೆ ಮೂರು ವಾಹನಗಳನ್ನು ಸ್ಥಳಕ್ಕೆ ಕರೆಸಲಾಗಿದೆ. ಸದ್ಯ ಆರು ಅಗ್ನಿಶಾಮಕ ವಾಹನಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೂ, ಕೆಲ ಗಂಟೆಯಿಂದಲೂ ಪರಿಸ್ಥಿತಿ ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ. ಈ ಅಗ್ನಿ ಅವಘಡದ ವಿಷಯ ತಿಳಿದು ಸಚಿವ ಟಿ.ಶ್ರೀನಿವಾಸ್ ಯಾದವ್ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿದ್ದರು.

ಶಾರ್ಟ್ ಸರ್ಕ್ಯೂಟ್​ನಿಂದ ಅಗ್ನಿ ಅವಘಡ ಶಂಕೆ:ಡೆಕ್ಕನ್ ನೈಟ್‌ವೇರ್ ಸ್ಪೋರ್ಟ್ಸ್ ಶಾಪಿಂಗ್ ಮಾಲ್‌ನ ಆರು ಅಂತಸ್ತಿನ ಕಟ್ಟಡದ ಕೆಳಗೆ ಕಾರಿನ ಬಿಡಿಭಾಗಗಳ ಗೋದಾಮು ಮತ್ತು ಅದರ ಮೇಲೆ ಸ್ಪೋರ್ಟ್ಸ್ ಶೋ ರೂಂ ಇದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್​​ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಗೋದಾಮಿನಿಂದ ಮೇಲ್ಮಹಡಿಯಲ್ಲಿರುವ ಶೋರೂಂಗೂ ಬೆಂಕಿ ವ್ಯಾಪಿಸಿದ್ದರಿಂದ ದಟ್ಟ ಹೊಗೆ ವ್ಯಾಪಿಸಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ, ಎನ್​ಡಿಆರ್‌ಎಫ್ ಹಾಗೂ ಪೊಲೀಸರು ಮತ್ತು 108 ಆ್ಯಂಬುಲೆನ್ಸ್​ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ:ಡಿವೈಡರ್​ಗೆ ಕಾರು ಡಿಕ್ಕಿ: ಮೂವರು ಪೊಲೀಸ್​ ಕಾನ್ಸ್‌ಟೇಬಲ್‌ಗಳಿಗೆ ಗಂಭೀರ ಗಾಯ

ABOUT THE AUTHOR

...view details