ಗುಂಟೂರು (ಆಂಧ್ರ ಪ್ರದೇಶ): ಜಿಲ್ಲೆಯಲ್ಲಿ ತೆಲುಗು ದೇಶ ಪಾರ್ಟಿ (ಟಿಡಿಪಿ) ವತಿಯಿಂದ ಬಡವರಿಗೆ ಸಂಕ್ರಾಂತಿ ನಿಮಿತ್ತ ಉಡುಗೊರೆ ನೀಡಲಾಗುತ್ತಿತ್ತು. ಈ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ ಮೂವರು ಮೃತಪಟ್ಟಿದ್ದರು. ಇದೀಗ ಮೃತರ ಕುಟುಂಬಕ್ಕೆ ಭಾರಿ ಮೊತ್ತದ ಪರಿಹಾರ ಘೋಷಣೆ ಮಾಡಲಾಗಿದೆ.
20 ಲಕ್ಷ ರೂಪಾಯಿ ಪರಿಹಾರ:ಉಯ್ಯೂರು ಪ್ರತಿಷ್ಠಾನದ ಸಂಘಟಕರು ಉಡುಗೊರೆ ವಿತರಣೆಯ ಕಾರ್ಯಕ್ರಮದಲ್ಲಿ ಮೃತಪಟ್ಟವರಿಗೆ ಪರಿಹಾರ ಘೋಷಿಸಿದ್ದಾರೆ. ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವುದಾಗಿ ಉಯ್ಯೂರು ಶ್ರೀನಿವಾಸ್ ಬಹಿರಂಗಪಡಿಸಿದ್ದಾರೆ. ಅಲ್ಲದೇ ಕುಟುಂಬ ಸದಸ್ಯರ ಯೋಗಕ್ಷೇಮವನ್ನು ನೋಡಿಕೊಳ್ಳಲಾಗುವುದು ಮತ್ತು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನೂ ಸಂಪೂರ್ಣ ಭರಿಸುವುದಾಗಿ ತಿಳಿಸಿದರು.
2 ಲಕ್ಷ ರೂ. ಪರಿಹಾರ ಘೋಷಿಸಿದ್ದ ಸಿಎಂ:ಟಿಡಿಪಿ ನಾಯಕ ಚಂದ್ರಬಾಬು ಕೂಡ ಪಕ್ಷದ ಪರವಾಗಿ ರೂಪಾಯಿ 5 ಲಕ್ಷ ರೂ ಪರಿಹಾರ ಪ್ರಕಟಿಸಿದ್ದಾರೆ. ಈ ಘಟನೆಗೆ ಸಿಎಂ ಜಗನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ. ಟಿಡಿಪಿಯ ಮತ್ತೊಬ್ಬ ನಾಯಕ ಕೊವೆಲಮುಡಿ ರವೀಂದ್ರ ಅವರು ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ರೂ.1 ಲಕ್ಷ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.