ಕರ್ನಾಟಕ

karnataka

ETV Bharat / bharat

ಎರಡು ಮನೆ.. 20 ದಿನಗಳು: ವಿದ್ಯುತ್ ಬಿಲ್ ಬರೋಬ್ಬರಿ ₹ 1,75,706 - ಹೈದರಾಬಾದ್

ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲ ಕೇಂದ್ರದ ಎರಡು ಮನೆಗಳಿಗೆ ರೂ.1,75,706 ಕರೆಂಟ್ ಬಿಲ್ ಬಂದಿದೆ ಎನ್ನುತ್ತಾರೆ ಗ್ರಾಹಕರು.

Electricity bill
ಸಾಂದರ್ಭಿಕ ಚಿತ್ರ

By

Published : Aug 6, 2022, 12:33 PM IST

ಹೈದರಾಬಾದ್(ತೆಲಂಗಾಣ):ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲ ಕೇಂದ್ರದ ಮನೆಗಳಿಗೆ ರೂ.1,75,706 ಕರೆಂಟ್ ಬಿಲ್ ಬಂದಿದೆ ಎಂದು ವರದಿಯಾಗಿದೆ. ಮಂಡಲ ಕೇಂದ್ರಕ್ಕೆ ಸೇರಿದ ನಲ್ಲವೆಳ್ಳಿ ಪುಲ್ಲಯ್ಯ ಎಂಬುವರ ಮನೆಗೆ ಕಳೆದ ತಿಂಗಳ(ಜುಲೈ) 16 ರಿಂದ ಈ ತಿಂಗಳ(ಆಗಸ್ಟ್​​) 5ರವರೆಗೆ ರೂ.87,338 ಬಿಲ್ ಬಂದಿದೆ. ನಲ್ಲವೆಲ್ಲಿಯಲ್ಲಿರುವ ನಿರಂಜನ್ ಎಂಬುವರರ ಮನೆಗೆ 20 ದಿನಗಳಲ್ಲಿ 8793 ಯೂನಿಟ್​​​ಗಳಿಗೆ ರೂ.88,368 ಬಿಲ್ ಬಂದಿದೆ.

ವಿದ್ಯುತ್ ಬಿಲ್

ಎರಡು ಬಲ್ಬ್, ಒಂದು ಫ್ಯಾನ್ ಬಳಸಿದರೆ ಇಷ್ಟೊಂದು ವಿದ್ಯುತ್ ಬಿಲ್ ಹೇಗೆ ಬರುತ್ತದೆ ಎಂದು ಇಬ್ಬರು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ. ದಲಿತರಿಗೆ ಉಚಿತ ವಿದ್ಯುತ್ ನೀಡಿದ ಕಾರಣ ಅಧಿಕಾರಿಗಳು ವರ್ಷಗಟ್ಟಲೆ ರೀಡಿಂಗ್ ತೆಗೆದುಕೊಂಡಿಲ್ಲ. ಅಧಿಕಾರಿಗಳನ್ನು ಕೇಳಿದರೆ ಅಸಮಂಜಸ ಉತ್ತರ ನೀಡುತ್ತಿದ್ದಾರೆ ಎಂದು ಪುಲ್ಲಯ್ಯ ಅವರ ಪುತ್ರ ಸೈದುಲು ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿದ ಎಇ ಶ್ರೀಕಾಂತ್ ರೆಡ್ಡಿ , ಈ ಹಿಂದೆ ಕೆಲಸ ಮಾಡಿದ ಸಿಬ್ಬಂದಿ ತಿಂಗಳು ಗಟ್ಟಲೇ ರೀಡಿಂಗ್ ತೆಗೆದುಕೊಳ್ಳದ ಕಾರಣ ಈ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಮೂರುವರೆ ಸಾವಿರ ಕೋಟಿ ರೂಪಾಯಿ ಕರೆಂಟ್​ ಬಿಲ್​ ನೋಡಿ ಆಸ್ಪತ್ರೆ ಸೇರಿದ ಮಾವ-ಸೊಸೆ

ABOUT THE AUTHOR

...view details