ಹೈದರಾಬಾದ್: ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರುತ್ತಲೇ ಇದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಆದರೆ ಇಂಧನ ಕ್ರೆಡಿಟ್ ಕಾರ್ಡ್ ಮೂಲಕ ನೀವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹಣ ಉಳಿತಾಯ ಮಾಡಬಹುದಾಗಿದೆ.
ಹೆಚ್ಚೆಚ್ಚು ಮೈಲಿ ಪ್ರಯಾಣ ಬೆಳೆಸುವರಿಗೆ ಈ ಇಂಧನ ಕ್ರೆಡಿಟ್ ಕಾರ್ಡ್ ಬಹಳ ಉಪಯುಕ್ತವಾಗಿದೆ. ಪ್ರಸ್ತುತ ಇಂಧನದ ಹೆಚ್ಚಿನ ಬೆಲೆಯನ್ನು ಪರಿಗಣಿಸಿ ಹಣ ಉಳಿಸಲು ಇದು ಉತ್ತಮ ಮಾರ್ಗವಾಗಿದೆ ಎಂದು ತಜ್ಞರು ಹೇಳುತ್ತಾರೆ.
ಆದರೆ ಕ್ರೆಡಿಟ್ ಕಾರ್ಡ್ ಕಂಪನಿಗಳು ನಿರ್ದಿಷ್ಟ ತೈಲ ನಿಗಮದೊಂದಿಗೆ ಪಾಲುದಾರಿಕೆಯನ್ನು ಹೊಂದಿರುತ್ತವೆ ಅಥವಾ ಮರುಪಾವತಿಗೆ ಅರ್ಹವಾದ ಶುಲ್ಕಗಳ ಮಾಸಿಕ ಮಿತಿಗಳನ್ನು ಹೊಂದಿರುತ್ತವೆ ಎಂಬುದನ್ನು ಬಳಕೆದಾರರು ತಿಳಿದಿರಬೇಕು. ಹಾಗಾಗಿ, ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳು ಲಾಭದಾಯಕವಾಗಿದೆ.
ಇಂಧನ ವೆಚ್ಚ ಅಧಿಕ, ಅಂದರೆ ನೀವು ಹೆಚ್ಚು ದೂರ ಕ್ರಮಿಸಿದ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ನೀಡಿರುವ ಬ್ಯಾಂಕ್ಗಳು ನಿಮಗೆ ಹೆಚ್ಚಿನ ಆಫರ್ ಅಥವಾ ಕ್ಯಾಶ್ ಬ್ಯಾಕ್ ನೀಡುತ್ತವೆ.
ಇಂಧನ ಕ್ರೆಡಿಟ್ ಕಾರ್ಡ್ ಬಳಸುವಾಗ ಪರಿಗಣಿಸಬೇಕಾದ ವಿಷಯಗಳು:
- ಕಾರ್ಡುಗಳನ್ನು ತೆಗೆದುಕೊಳ್ಳಲು ನೀವು ಕೆಲ ಶುಲ್ಕಗಳನ್ನು ಭರಿಸಬೇಕಾಗುತ್ತದೆ ಹಾಗೂ ವಾರ್ಷಿಕ ಶುಲ್ಕಗಳು ಬದಲಾಗುತ್ತಿರುತ್ತವೆ.
- ಕೆಲವು ಕಾರ್ಡ್‌ಗಳನ್ನು ಯಾವುದೇ ವಾರ್ಷಿಕ ಶುಲ್ಕವಿಲ್ಲದೇ ಬಳಸಬಹುದು. ಆದರೆ ಇದಕ್ಕಾಗಿ ನೀವು ಹೆಚ್ಚುವರಿ ಹಣ ಕಟ್ಟಬೇಕಾಗುತ್ತದೆ.
- ನೀವು ಇರುವ ಸ್ಥಳದಲ್ಲಿ ಯಾವುದೇ ಇಂಧನ ಕಾರ್ಡ್ ಬ್ಯಾಂಕ್ಗಳಿವೆಯೇ ಎಂಬುದನ್ನು ಗಮನಿಸಬೇಕು.
- ರಿವಾರ್ಡ್ ಪಾಯಿಂಟ್ ಅಥವಾ ಕ್ಯಾಶ್ ಬ್ಯಾಕ್ ಬಳಸಲು ಗಡುವು ಕೂಡ ಇರುತ್ತದೆ. ಅವಧಿ ಮುಗಿದ ಮೇಲೆ ಅದು ವ್ಯರ್ಥವಾಗುತ್ತದೆ.
- ಕೆಲವು ಕ್ಯಾಶ್ ಬ್ಯಾಕ್ ಅಥವಾ ಬಹುಮಾನಗಳನ್ನು ಆಯ್ದ ಇ-ಕಾಮರ್ಸ್ ಪೋರ್ಟಲ್‌ಗಳು ಅಥವಾ ಆಫ್‌ಲೈನ್ ಶಾಪಿಂಗ್ಗೆ ಮಾತ್ರ ಬಳಸಬಹುದು.