ಕರ್ನಾಟಕ

karnataka

ETV Bharat / bharat

ರಾಷ್ಟ್ರಧ್ವಜವನ್ನು ಜೋಪಾನವಾಗಿ ಮಡಿಚಿಡುವ ಬಗೆ ತಿಳಿದಿದೆಯೇ?: ಇಲ್ಲಿದೆ ಮಾಹಿತಿ - ಹರ್ ಘರ್ ತಿರಂಗ

ರಾಷ್ಟ್ರಧ್ವಜವನ್ನು ಹೇಗೆ ಮಡಿಸಿ ಇಡಬೇಕು ಹಾಗೂ ಹೇಗೆ ಶೇಖರಿಸಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ಜನರಿಗೆ ಮಾಹಿತಿ ಒದಗಿಸಿದೆ.

ರಾಷ್ಟ್ರಧ್ವಜವನ್ನು ಹಾರಿಸಲು ಮೋದಿ ಸೂಚನೆ
ರಾಷ್ಟ್ರಧ್ವಜವನ್ನು ಹಾರಿಸಲು ಮೋದಿ ಸೂಚನೆ

By

Published : Aug 4, 2022, 8:41 PM IST

ನವದೆಹಲಿ: 75ನೇ ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಚಾಲನೆ ನೀಡಿದೆ. ಇದೀಗ ರಾಷ್ಟ್ರಧ್ವಜದ ಕುರಿತಾಗಿ ನಾಗರಿಕರಿಗೆ ಮಾರ್ಗಸೂಚಿ ಪ್ರಕಟಿಸಿದೆ. ಆಗಸ್ಟ್ 13 ಮತ್ತು 15 ರ ನಡುವೆ ತ್ರಿವರ್ಣ ಧ್ವಜವನ್ನು ಮನೆಗೆ ತಂದು ಧ್ವಜಾರೋಹಣದ ನಂತರ ಹೇಗೆ ಮಡಿಸಿಡಬೇಕು ಎಂಬುದನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಈ ಕೆಳಗಿನಂತೆ ಹಂತ-ಹಂತವಾಗಿ ತಿಳಿಸಿದೆ.

ಈ ರೀತಿ ಮಾಡಿ
  • ಧ್ವಜವನ್ನು ಅಡ್ಡಲಾಗಿ ಇರಿಸಬೇಕು.
  • ಮಧ್ಯದ ಬಿಳಿ ಪಟ್ಟಿಯ ಮೇಲೆ ಹಾಗೂ ಕೆಳಗೆ ಕೇಸರಿ ಮತ್ತು ಹಸಿರು ಪಟ್ಟಿಗಳು ಇರುವಂತೆ ಮಡಿಸಬೇಕು.
  • ಕೇಸರಿ ಮತ್ತು ಹಸಿರು ಪಟ್ಟಿಗಳ ಭಾಗಗಳೊಂದಿಗೆ ಅಶೋಕ ಚಕ್ರ ಕಾಣುವ ರೀತಿಯಲ್ಲಿ ಬಿಳಿ ಪಟ್ಟಿಯನ್ನು ಮಡಿಸಬೇಕು.
  • ಈ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಮಡಿಸಿದ ಧ್ವಜವನ್ನು ಶೇಖರಿಸಲು ಅಂಗೈ ಅಥವಾ ತೋಳುಗಳ ಮೇಲೆ ಒಯ್ಯಬೇಕು.

ABOUT THE AUTHOR

...view details