ಹೈದರಾಬಾದ್: ಮುಂದಿನ ಬದುಕನ್ನು ಸ್ಥಿತ್ಯಂತರಗಳಿಂದ ಕಾಪಾಡಿಕೊಳ್ಳಬೇಕಾದರೆ ನಾವು - ನೀವೆಲ್ಲ ಗಳಿಸಿದ ಕೆಲ ಭಾಗದಲ್ಲಿ ಉಳಿತಾಯ ಮಾಡಲೇಬೇಕು. ಇದಕ್ಕಾಗಿ ಯೋಜನಾ ಬದ್ಧವಾದ ಆರ್ಥಿಕ ಯೋಜನೆ ರೂಪಿಸಿಕೊಳ್ಳಲೇಬೇಕು. ಮುಂಬರುವ ಸುಂದರ ಬದುಕಿಗಾಗಿ ಗಳಿಕೆಯ ಕೆಲ ಭಾಗವನ್ನು ಹೂಡಿಕೆಗೆ ಮೀಸಲಿಡಬೇಕು.
ಹೀಗೆ ಹೂಡಿಕೆಗೆ ಹಣ ಮೀಸಲಿರಿಸುವುದರಿಂದ ಸಂಪತ್ತು ಸೃಷ್ಟಿಸಲು ಅವಕಾಶವಿದೆ. ಆದರೆ, ಏರುತ್ತಿರುವ ಹಣದುಬ್ಬರವು ನಮ್ಮ ನಿವ್ವಳ ಆದಾಯವನ್ನು ಕಡಿಮೆ ಮಾಡುತ್ತಿದೆ. ಆದ್ದರಿಂದ, ದೀರ್ಘಾವಧಿಯಲ್ಲಿ ಹೆಚ್ಚು ಪರಿಣಾಮ ಬೀರದ ಹೂಡಿಕೆಗಳನ್ನು ಆಯ್ಕೆ ಮಾಡುವುದು ನಮ್ಮ ಮೊದಲ ಆದ್ಯತೆ ಆಗಬೇಕಿದೆ.
ಪ್ರಸ್ತುತ ದೇಶದಲ್ಲೀಗ ಬೆಲೆ ಏರಿಕೆ ನಿರೀಕ್ಷೆಗಿಂತ ಹೆಚ್ಚಾಗಿದೆ. ಈ ಹೆಚ್ಚಿನ ಹಣದುಬ್ಬರವು ಹೂಡಿಕೆಯ ಮೌಲ್ಯವನ್ನು ದಿಢೀರ್ ಕುಸಿಯುವಂತೆ ಮಾಡುತ್ತಿದೆ. ಉದಾಹರಣೆಗೆ ಹೂಡಿಕೆ ಯೋಜನೆಯು ಏಳು ಶೇಕಡಾ ಆದಾಯವನ್ನು ತಂದುಕೊಡುತ್ತದೆ ಎಂದು ಭಾವಿಸಿಕೊಳ್ಳುವುದಾದರೆ, ಆಗ ಹಣದುಬ್ಬರ ಶೇಕಡಾ ಆರು ಇದ್ದರೆ. ನಿವ್ವಳ ಆದಾಯ ಕೇವಲ ಶೇ ಒಂದರಷ್ಟಾಗುತ್ತದೆ. ಆದುದರಿಂದ ಯಾವುದೇ ಹೂಡಿಕೆ ಯೋಜನೆಯನ್ನು ಆಯ್ಕೆಮಾಡುವಾಗ, ಸರಾಸರಿ ಆದಾಯವು ಹಣದುಬ್ಬರಕ್ಕಿಂತ ಕನಿಷ್ಠ ಎರಡರಿಂದ ಮೂರು ಶೇಕಡಾಕ್ಕಿಂತ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕಿದೆ. ಆಗ ಮಾತ್ರವೇ ನಾವು ಉದ್ದೇಶಿತ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ.
ಚಿನ್ನದ ಮೇಲಿನ ಹೂಡಿಕೆ ಹಣದುಬ್ಬರ ನಿಯಂತ್ರಣಕ್ಕೆ ಪೂರಕ:ಹಣದುಬ್ಬರದ ಲೆಕ್ಕಾಚಾರದ ಮೇಲೆ ಹೂಡಿಕೆ ಮಾಡಬೇಕು ಎಂದು ಯೋಚಿಸುವುದಾದರೆ ಮೊದಲು ಆಲೋಚಿಸಬೇಕಾಗಿರುವುದು ಚಿನ್ನ ಬಗ್ಗೆ. ಆದ ಮಾತ್ರ ಚಿನ್ನ ಮೊದಲ ಆದ್ಯತೆಯ ಆಯ್ಕೆ ಆಗುತ್ತದೆ. ಅಧಿಕ ಹಣದುಬ್ಬರದ ಪರಿಸ್ಥಿತಿಗಳಲ್ಲಿ ಎಲ್ಲ ಆರ್ಥಿಕತೆಗಳು ದುರ್ಬಲ ಆಗಿರುತ್ತವೆ ಎಂದು ನಂಬಲಾಗಿದೆ. ಚಿನ್ನದಿಂದ ಬರುವ ಆದಾಯ ಯಾವಾಗಲೂ ಹೆಚ್ಚಿರುವುದಿಲ್ಲ. ಆದಾಗ್ಯೂ, ಯುದ್ಧದಂತಹ ಅನಿಶ್ಚಿತತೆಯ ಪರಿಸ್ಥಿತಿಯಲ್ಲಿ ಇದು ವಿಶ್ವಾಸಾರ್ಹ ಹೂಡಿಕೆ ಎಂದೇ ನಂಬಲಾಗಿದೆ.
ದೀರ್ಘಾವಧಿಯ ತಂತ್ರದೊಂದಿಗೆ ಇದನ್ನು ಚಿನ್ನದ ಹೂಡಿಕೆಯನ್ನು ಆಯ್ಕೆ ಮಾಡುವುದರಿಂದ ಉತ್ತಮ ಆದಾಯ ಬರುವ ಸಾಧ್ಯತೆಗಳಿವೆ. ಚಿನ್ನವನ್ನು ನೇರವಾಗಿ ಖರೀದಿಸುವುದು, ಚಿನ್ನದ ವಿನಿಮಯ-ವಹಿವಾಟು ನಿಧಿಗಳು ಮತ್ತು ಸಾರ್ವಭೌಮ ಚಿನ್ನದ ಬಾಂಡ್‌ಗಳನ್ನು (SGB) ಇಂತಹ ಹೂಡಿಕೆಗೆ ಪರಿಗಣಿಸಬಹುದು. SGB ಯಲ್ಲಿ ಹೂಡಿಕೆಯು 2.5 ಪ್ರತಿಶತ ವಾರ್ಷಿಕ ಲಾಭವನ್ನು ನೀಡುತ್ತದೆ. ಅವಧಿಯ ಮುಕ್ತಾಯದ ನಂತರ ಸ್ವೀಕರಿಸಿದ ಮೊತ್ತದ ಮೇಲೆ ಯಾವುದೇ ಬಂಡವಾಳ ಲಾಭ ತೆರಿಗೆ ಇರುವುದಿಲ್ಲ.
ಈಕ್ವಿಟಿ ಹೂಡಿಕೆ ಸೂಕ್ತವೇ?:ಸ್ಟಾಕ್ ಮಾರುಕಟ್ಟೆ ಆಧಾರಿತ ಹೂಡಿಕೆ ಎಂದರೆ ನೀವು ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡಿದರೆ ಅಥವಾ ಇಕ್ವಿಟಿ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಿದರೆ ಸ್ವಲ್ಪ ಅಪಾಯವೇ ಹೆಚ್ಚು. ಇದು ಒಂದು ರೀತಿಯ ಜೂಜಾಟ ಇದ್ದಂತೆ. ಆದರೆ ಆ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ಜಾಣ್ಮೆ ಹೂಡಿಕೆ ಮಾಡಿದರೆ ಅಂತವರಿಗೆ ಇದರಿಂದ ಯಾವುದೇ ಅಪಾಯವಿಲ್ಲ. ಹಣದುಬ್ಬರ ಹೆಚ್ಚಾದಾಗ ಅಲ್ಪಾವಧಿಯಲ್ಲಿ ಇವುಗಳ ಮೌಲ್ಯದಲ್ಲಿ ಏರುಪೇರಾಗುತ್ತವೆ.
ದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ಷೇರು ಮಾರುಕಟ್ಟೆ ಅನೇಕ ಅವಕಾಶಗಳನ್ನು ನೀಡುತ್ತದೆ. ನೀವು ಈಕ್ವಿಟಿ ಫಂಡ್‌ಗಳು ಮತ್ತು ಷೇರುಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ, ರಚನಾತ್ಮಕ ಹೂಡಿಕೆ ಯೋಜನೆ (SIP) ಅನ್ನು ಆಯ್ಕೆ ಮಾಡುವುದು ಉತ್ತಮ. ಇದು ಹಣದ ಸರಾಸರಿ ಲಾಭವನ್ನು ನೀಡುತ್ತದೆ ಮತ್ತು ನಷ್ಟದ ಭಯವೂ ಕಡಿಮೆಯಾಗುತ್ತದೆ. ಅದೇ ರೀತಿ, ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವಾಗ ಸಾಧ್ಯವಾದಷ್ಟು ಬೇರೆ ಬೇರೆ ಆಯ್ಕೆಗಳನ್ನು ಮಾಡಿಕೊಳ್ಳಿ. ಒಂದೇ ಷೇರಿನ ಮೇಲೆ ಹೆಚ್ಚು ಹೂಡಿಕೆ ಮಾಡುವುದು ಸರಿಯಾದ ಕ್ರಮವಲ್ಲ.