ನವದೆಹಲಿ : ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಟ್ರೆಂಡಿಂಗ್ ವಿಷಯಗಳಿಗೆ ಹೆಸರುವಾಸಿ. ಟ್ರೆಂಡಿಂಗ್‌ನಲ್ಲಿರುವ ವಿಡಿಯೋಗಳನ್ನು ತಮ್ಮ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಭಾರತೀಯ-ಅಮೆರಿಕನ್ ವ್ಯಕ್ತಿಯ ಶುದ್ಧ ಚಿನ್ನದ ಫೆರಾರಿ ಕಾರಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಕಾರಿನ ವಿಶೇಷತೆ ಏನು? ಎಂಬುದರ ಬಗ್ಗೆ ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರಾ ಮಾತನಾಡಿದ್ದಾರೆ.
ಟ್ವಿಟರ್‌ನಲ್ಲಿ ವೈರಲ್ ಆಗಿರುವ ಚಿನ್ನದ ಕಾರಿನ ವಿಡಿಯೋವನ್ನು ಹಂಚಿಕೊಂಡಿದ್ದು, ಕಾರಿನಲ್ಲಿ ವ್ಯಕ್ತಿ ಹಾಗೂ ಆತನ ಸಹ ಪ್ರಯಾಣಿಕ ಕುಳಿತಿದ್ದು, ರಸ್ತೆಯಲ್ಲಿರುವ ಜನರು ಆ ಕಾರನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ.