ಕರ್ನಾಟಕ

karnataka

ETV Bharat / bharat

ದಾವೂದ್​ ಜತೆ ನೇರ ಸಂಪರ್ಕ ಹೊಂದಿದ್ದವರನ್ನು ಠಾಕ್ರೆ ಅವರ ಶಿವಸೇನೆ ಹೇಗೆ ಬೆಂಬಲಿಸುತ್ತದೆ?: ಶಿಂದೆ ಪ್ರಶ್ನೆ

ಬಂಡಾಯ ಸಚಿವ ಏಕನಾಥ್​​ ಶಿಂಧೆ ಶಿವಸೇನೆ ಮತ್ತು ಉದ್ಧವ್ ಠಾಕ್ರೆ ಅವರಿಗೆ ಟ್ವೀಟ್ ಮೂಲಕ ಪ್ರಶ್ನೆಯೊಂದನ್ನು ಕೇಳಿದ್ದಾರೆ.

Eknath Shinde tweet
ಏಕನಾಥ್​​ ಶಿಂಧೆ ಟ್ವೀಟ್

By

Published : Jun 27, 2022, 8:19 AM IST

Updated : Jun 27, 2022, 8:49 AM IST

ಮುಂಬೈ(ಮಹಾರಾಷ್ಟ್ರ):ಶಾಸಕರ ಬಂಡಾಯದಿಂದ ಶಿವಸೇನೆ, ಎನ್​​ಸಿಪಿ ಮತ್ತು ಕಾಂಗ್ರೆಸ್​​ ಮೈತ್ರಿಕೂಟದ ಮಹಾವಿಕಾಸ್​ ಅಘಾಡಿ ಸರ್ಕಾರ ಪತನದಂಚಿಗೆ ತಲುಪಿದೆ. ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ದಿನೇ ದಿನೆ ತಿರುವು ಪಡೆಯುತ್ತಿದ್ದು, ದೇಶದಲ್ಲಿ ಭಾರಿ ಸಂಚಲನ ಮೂಡಿಸಿದೆ. ಆರೋಪ, ಪತ್ಯಾರೋಪಗಳು ಜೋರಾಗಿವೆ.

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಯುವಸೇನೆ ಮುಖ್ಯಸ್ಥ ಆದಿತ್ಯ ಠಾಕ್ರೆ ಮತ್ತು ಸಂಸದ ಸಂಜಯ್ ರಾವುತ್​, ಏಕನಾಥ್​​ ಶಿಂದೆ ಮತ್ತು ಬಂಡಾಯ ಶಾಸಕರ ವಿರುದ್ಧ ಟೀಕಾ ಪ್ರಹಾರವನ್ನೇ ಮಾಡಿದ್ದಾರೆ. ಈ ನಡುವೆ ಇದೀಗ ಟ್ವೀಟ್‌ ಮೂಲಕ ಏಕನಾಥ್ ಶಿಂದೆ ಅವರು ಶಿವಸೇನೆ ಮತ್ತು ಉದ್ಧವ್ ಠಾಕ್ರೆ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ.

ಮುಂಬೈನಲ್ಲಿ ಬಾಂಬ್ ಸ್ಫೋಟ ನಡೆಸಿ ಅಮಾಯಕ ಮುಂಬೈಗರನ್ನು ಕೊಂದ ದಾವೂದ್​ನೊಂದಿಗೆ ನೇರ ಸಂಪರ್ಕ ಹೊಂದಿದ್ದವರ ಜತೆ ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆ ಹೇಗೆ ಬೆಂಬಲಿಸುತ್ತದೆ? ಎಂಬ ಪ್ರಶ್ನೆಯನ್ನು ಶಿಂದೆ ಕೇಳಿದ್ದಾರೆ. ನಮ್ಮೆಲ್ಲರನ್ನೂ ಸಾವಿನ ಅಂಚಿಗೆ ಕೊಂಡೊಯ್ದರೂ ಪರವಾಗಿಲ್ಲ, ಪ್ರತಿಭಟನೆ ಹೆಜ್ಜೆ ಇಡುವುದು ಉತ್ತಮ ಎಂದು ಶಿಂದೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ರಾಷ್ಟ್ರಪತಿ ಚುನಾವಣೆ: ಇಂದು ಯಶವಂತ್​ ಸಿನ್ಹಾ ನಾಮಪತ್ರ ಸಲ್ಲಿಕೆ

ಸಂಜಯ್ ರಾವುತ್ ಹೇಳಿದ್ದೇನು? :ದಹಿಸರ್‌ನಲ್ಲಿ ನಡೆದ ಶಿವಸೇನೆ ರ್ಯಾಲಿಗೆ ಮಾರ್ಗದರ್ಶನ ನೀಡುತ್ತಿದ್ದ ಸಂಜಯ್ ರಾವತ್, 40 ಶಾಸಕರ ಪಾರ್ಥಿವ ಶರೀರ ನೇರವಾಗಿ ಗುವಾಹಟಿಯಿಂದ ಬರಲಿದೆ ಎಂದು ಹೇಳಿದ್ದರು. ಮರಣೋತ್ತರ ಪರೀಕ್ಷೆಗಾಗಿ ನೇರವಾಗಿ ಶವಾಗಾರಕ್ಕೆ ಕಳುಹಿಸುತ್ತೇವೆ ಎಂದು ರಾವುತ್ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಏಕನಾಥ್ ಶಿಂದೆ ಈ ರೀತಿಯ ಟ್ವೀಟ್ ಮಾಡಿದ್ದಾರೆ. ಪ್ರತಿಭಟನೆ ಹೆಜ್ಜೆ ಇಡುವುದು ಉತ್ತಮ. ಸಾವು ಸತ್ತರೂ ಪರವಾಗಿಲ್ಲ ಎಂದು ಶಿಂದೆ ಹೇಳಿದ್ದಾರೆ.

Last Updated : Jun 27, 2022, 8:49 AM IST

ABOUT THE AUTHOR

...view details