ಪನ್ಸ್ಕುರಾ (ಪಶ್ಚಿಮಬಂಗಾಳ) :10 ತಿಂಗಳ ಮಗುವಿಗೆ ಮನೆ ಕೆಲಸದಾಕೆ ಚಿತ್ರಹಿಂಸೆ ನೀಡಿರುವ ಘಟನೆ ಪಶ್ಚಿಮ ಬಂಗಾಳದ ಪನ್ಸ್ಕುರಾದಲ್ಲಿ ನಡೆದಿದೆ. ಈಗಾಗಲೇ ಆಕೆಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ಮಗುವಿಗೆ ಮೇಲಿಂದ ಮೇಲೆ ಚಿತ್ರಹಿಂಸೆ ನೀಡುವುದು ಖಚಿತಗೊಂಡಿದೆ.
ಘಟನೆಯ ಸಂಪೂರ್ಣ ವಿವರ
ಪೊಲೀಸರು ತಿಳಿಸಿರುವ ಪ್ರಕಾರ ಚಿತ್ರಹಿಂಸೆಗೊಳಗಾಗಿರುವ ಮಗು ಡಾ.ದೇಬಶಿಶ್ ದಾಸ್ ಮತ್ತು ನಬಮಿತಾ ಭಟ್ಟಾಚಾರ್ಯ ಅವರ ಪುತ್ರಿ. ಡಾ. ದಾಸ್ ಹಾಗೂ ಆತನ ಪತ್ನಿ ವೈದ್ಯರಾಗಿದ್ದ ಕಾರಣ ಮನೆ ಬಿಟ್ಟು ಬೇರೆ ನಗರದಲ್ಲಿ ವಾಸವಾಗಿದ್ದರು.
ವಾರಾಂತ್ಯದಲ್ಲಿ ಮಾತ್ರ ಮನೆಗೆ ಬರುತ್ತಿದ್ದ ಕಾರಣ ಕಲ್ಪನಾ ಎಂಬ ಯುವತಿಗೆ ಮಗು ನೋಡಿಕೊಳ್ಳುವ ಜವಾಬ್ದಾರಿ ನೀಡಿದ್ದರು. ಜೊತೆಗೆ ತಮ್ಮ ಮನೆಯಲ್ಲಿ ಸಿಸಿಟಿವಿ ಅಳವಡಿಸಿದ್ದರು. ಮಗು ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡಿದ್ದ ಮಹಿಳೆ ಕಳೆದ ಕೆಲ ದಿನಗಳಿಂದ ಅದರ ಮೇಲೆ ನಿರಂತರವಾಗಿ ಚಿತ್ರಹಿಂಸೆ ನೀಡುತ್ತಿದ್ದಳು.