ಕರ್ನಾಟಕ

karnataka

ETV Bharat / bharat

ಮಳೆ ತಂದಿಟ್ಟ ಆಪತ್ತು: ಮನೆ ಕುಸಿದು ಒಂದೇ ಕುಟುಂಬದ 7 ಮಂದಿ ಸಮಾಧಿ!

ಮಳೆಯಿಂದಾಗಿ ಮನೆವೊಂದು ಕುಸಿದು ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

Rajasthan News
Rajasthan News

By

Published : Aug 4, 2021, 7:03 PM IST

ಕೇಶೋರೈಪತನ್​(ರಾಜಸ್ಥಾನ): ದೇಶದ ಕೆಲವೊಂದು ರಾಜ್ಯಗಳಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಇದರ ಆರ್ಭಟ ಜೋರಾಗಿದೆ. ಭೀಕರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದೀಗ ರಾಜಸ್ಥಾನದ ಕೇಶೋರೈಪತನ್​​ದಲ್ಲಿ ಮನೆಯೊಂದು ಕುಸಿದಿದ್ದು, ಒಂದೇ ಕುಟುಂಬದ ಏಳು ಮಂದಿ ಸಮಾಧಿಯಾಗಿದ್ದಾರೆ.

:ಮನೆ ಕುಸಿದು ಒಂದೇ ಕುಟುಂಬದ 7 ಮಂದಿ ಸಮಾಧಿ

ನಿರಂತರವಾಗಿ ಸುರಿದ ಮಳೆಯಿಂದಾಗಿ ಮನೆ ಕುಸಿತಗೊಂಡಿದ್ದು, ಈ ವೇಳೆ ಮನೆಯಲ್ಲಿ ಏಳು ಜನರು ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಅವರೆಲ್ಲರೂ ಸಮಾಧಿಯಾಗಿದ್ದು, ಮೃತದೇಹ ಹೊರತೆಗೆಯಲಾಗಿದೆ. ಓರ್ವ ಮಹಿಳೆ ಹಾಗೂ ಬಾಲಕಿ ಉಸಿರಾಡುತ್ತಿದ್ದ ಕಾರಣ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಎನ್​​ಡಿಆರ್​ಎಫ್​​​ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಸುಮಾರು 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿದ್ದು, ಎಲ್ಲ ಮೃತದೇಹ ಹೊರತೆಗೆಯಲಾಗಿದೆ. ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿರುವುದು ಇದೀಗ ಇಡೀ ಗ್ರಾಮದಲ್ಲಿ ಹೆಚ್ಚು ಆಘಾತಕ್ಕೆ ಕಾರಣವಾಗಿದೆ.

ಇದನ್ನೂ ಓದಿರಿ: ಉತ್ತರ ಭಾರತದಲ್ಲಿ ಭಾರಿ ಮಳೆ: ರಾಜಸ್ಥಾನ - ಮಧ್ಯಪ್ರದೇಶ, ಬಂಗಾಳದಲ್ಲಿ ಪ್ರವಾಹ!

ಮನೆ ಕುಸಿಯುತ್ತಿದ್ದಂತೆ ದೊಡ್ಡ ಪ್ರಮಾಣದಲ್ಲಿ ಸ್ಫೋಟಗೊಂಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ತಕ್ಷಣವೇ ನೆರೆಹೊರೆಯವರು ಧಾವಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದಾರೆ. ಆರಂಭದಲ್ಲಿ ಮಗು ಹಾಗೂ ಮಹಿಳೆ ಹೊರತೆಗೆಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ABOUT THE AUTHOR

...view details