ಮಿರ್ಜಾಪುರ (ಉತ್ತರಪ್ರದೇಶ) ಭಾರಿ ಮಳೆಗೆ ಪ್ರವಾಹ ಉಂಟಾಗಿದ್ದು, ಇಲ್ಲಿನ ಕೆಲವು ಕಡೆ ಪರಿಸ್ಥಿತಿ ದಿನೇ ದಿನೇ ಅನಿಯಂತ್ರಿತವಾಗುತ್ತಿದೆ. ಮನೆಗಳಿಗೆ ನೀರು ನುಗ್ಗುತ್ತಿದೆ. ಇನ್ನೂ ಕೆಲವೆಡೆ ಮನೆಗಳೇ ಕೊಚ್ಚಿಕೊಂಡು ಹೋಗುತ್ತಿವೆ.
ಭೀಕರ ಪ್ರವಾಹ: ಗಂಗಾ ನದಿಯಲ್ಲಿ ಕೊಚ್ಚಿ ಹೋಯ್ತು ಮನೆ! - ಗಂಗಾ ನದಿಯಲ್ಲಿ ಕೊಚ್ಚಿ ಹೋಯ್ತು ಮನೆ,
ವರುಣನ ಆರ್ಭಟದಿಂದ ಉತ್ತರ ಪ್ರದೇಶದಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಗಂಗಾ ನದಿಯಲ್ಲಿ ಪ್ರವಾಹ ಅಬ್ಬರಕ್ಕೆ ಮನೆಯೊಂದು ಕೊಚ್ಚಿ ಹೋಗಿದೆ.
ಕೊಚ್ಚಿಹೋದ ಮನೆ
ನಗರದ ಕೊತ್ವಾಲಿ ಪ್ರದೇಶ, ಬರಿಯಾ ಘಾಟ್‌ನಲ್ಲಿ ಮನೆಗಳು ಜಲಾವೃತವಾಗುತ್ತಿವೆ. ಇಲ್ಲೊಂದು ಮನೆ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದೆ. ಇಡೀ ಮನೆಯೇ ಒಂದು ಗಂಗಾನದಿಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡು ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಇದು ಹೇಗೆ ಸಂಭವಿಸಿದೆ ಎಂದು ಆಶ್ಚರ್ಯಪಟ್ಟಿದ್ದಾರೆ. ಈ ಮನೆ ಎಲ್ಲಿಂದ ಕೊಚ್ಚಿಕೊಂಡು ಬಂದಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
Last Updated : Aug 12, 2021, 5:41 PM IST