ಎರ್ನಾಕುಲಂ (ಕೇರಳ):ಇಲ್ಲಿನ ಕೋಥಮಂಗಲಂನಲ್ಲಿ ಬಾವಿಯೋಳಗೆ ಬಿದ್ದು ಒದ್ದಾಡುತ್ತಿದ್ದ ಕಾಡಾನೆ ಮರಿಯನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಗಂಟೆಗೂ ಹೆಚ್ಚು ಹೊತ್ತು ನಡೆಸಿದ ಕಾರ್ಯಾಚರಣೆಯ ಬಳಿಕ ಆನೆ ಮರಿಯನ್ನು ಯಶಸ್ವಿಯಾಗಿ ಬಾವಿಯಿಂದ ಮೇಲೆತ್ತಲಾಗಿದೆ. ಕೋಥಮಂಗಲಂನ ಗೋಪಾಲಕೃಷ್ಣ ಎಂಬುವರ ಜಮೀನಿನಲ್ಲಿದ್ದ ಸುಮಾರು 5 ಅಡಿ ಬಾವಿಯೊಳಗೆ ಬಿದ್ದಿದ್ದ ಆನೆ ಮರಿ ಮೇಲೆ ಬರಲಾಗದೇ ಒದ್ದಾಡುತ್ತಿತ್ತು.
ಇದನ್ನು ಗಮನಿಸಿದ ಸ್ಥಳೀಯರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಗೋಪಾಲಕೃಷ್ಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಜೆಸಿಬಿ ಬಳಿಸಿ ಬಾವಿಯ ಒಂದು ಭಾಗದಲ್ಲಿ ಆನೆ ಹತ್ತಿ ಬರಲು ಅನುವು ಮಾಡಿಕೊಟ್ಟರು. ಆದರೆ ಇದಕ್ಕೂ ಮೊದಲು ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ಸಹ ನಡೆಯಿತು.