ಹೈದರಾಬಾದ್:ಇತ್ತಿಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೇಚ್ಚಾಗುತ್ತಿವೆ. ಮೊಬೈಲ್ಗಳಿಗೆ ಸುಳ್ಳು ಸಂದೇಶಗಳನ್ನು ಕಳುಹಿಸುವ ಮೂಲಕ, ವಂಚಿಸಿ ದಾಖಲಾತಿಗಳನ್ನು ಪಡೆದು ಅಕೌಂಟ್ನಿಂದ ಹಣ ಎಗರಿಸುತ್ತಿರುವ ಪ್ರಕರಣಗಳು ಹೇಚ್ಚಾಗಿವೆ. ಇಂತಹದೊಂದು ಪ್ರಕರಣ ಹೈದರಾಬಾದ್ನಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬನ ಅಕೌಂಟ್ನಿಂದ ಬರೋಬ್ಬರಿ 25 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹೈದರಾಬಾದ್‌ನ ಸಿಕಂದರಾಬಾದ್‌ನಲ್ಲಿ ವಾಸಿಸುತ್ತಿರುವ ಖಾಸಗಿ ಉದ್ಯೋಗಿಯೊಬ್ಬರು ಈ ಹಣವನ್ನು ಕಳೆದುಕೊಂಡಿದ್ದಾರೆ. ಇವರ ಮೊಬೈಲ್ಗೆ ಸೈಬರ್ ವಂಚಕರು ಹಾಟ್ ಮೇಲ್ ಮೂಲಕ ಸಂದೇಶ ಕಳುಹಿಸಿದ್ದಾರೆ. ನಂತರ ಆತನ ಮೊಬೈಲ್ ಹ್ಯಾಕ್ ಮಾಡಿ ಆತನ ಅಕೌಂಟ್ನಿಂದ 25 ಲಕ್ಷ ಎಗರಿಸಿದ್ದಾರೆ.
ಆ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ, ಸಿಸಿಎಸ್ ಪೊಲೀಸರು ಸೈಬರ್ ವಂಚಕರು ಸೆಲ್ ಫೋನ್ ಹ್ಯಾಕ್ ಮಾಡಿ ವಂಚನೆ ಮಾಡಿದ್ದಾರೆ ಎಂದು ಪತ್ತೆ ಮಾಡಿದರು. ಅಪರಾಧಿಗಳು ಆ ವ್ಯಕ್ತಿಗೆ ಕಳುಹಿಸಿದ ಸಂದೇಶಗಳನ್ನು ಆಧರಿಸಿ, ವಂಚನೆ ನಡೆದ ವಿಧಾನವನ್ನು ಪೊಲೀಸರು ವಿಶ್ಲೇಷಿಸಿದ್ದಾರೆ.
ಸೈಬರ್ ವಂಚಕರು ಮೊದಲು ಸೆಲ್ ಫೋನ್ ಮೂಲಕ ಡಿಜಿಟಲ್ ವಹಿವಾಟು ನಡೆಸಿದವರ ವಿವರಗಳನ್ನು ಸಂಗ್ರಹಿಸುತ್ತಾರೆ. ಅವರು ನಿಮ್ಮ ಫೋನ್‌ಗಳಿಗೆ ಲಾಟರಿ ಮತ್ತು ಬಹುಮಾನಗಳನ್ನು ಆಕರ್ಷಿಸುವ SMS ಕಳುಹಿಸುತ್ತಾರೆ. ಹಾಗೆಯೆ ಈ ವ್ಯಕ್ತಿಗೂ ಎರಡು, ಮೂರು ಎಸ್‌ಎಂಎಸ್‌ಗಳು ಬಂದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೊಬೈಲ್ಗೆ ಬಂದ SMS ಗಳನ್ನು ಆ ವ್ಯಕ್ತಿ ಓಪನ್ ಮಾಡಿದ ತಕ್ಷಣವೇ ಆತನ ಎಲ್ಲ ವಿವರಗಳು ಸೈಬರ್ ವಂಚಕರಿಗೆ ಸೋರಿಕೆಯಾಗಿವೆ. ಆ ವ್ಯಕ್ತಿ ಬಿಟ್ ಕಾಯಿನ್ ಗಳನ್ನು ಖರೀದಿಸಿದ್ದನ್ನು ಕಂಡುಕೊಂಡ ಸೈಬರ್ ಖದೀಮರು ಆತನ ಅಕೌಂಟ್ನಿಂದ 25 ಲಕ್ಷ ವರ್ಗಾಯಿಸಿ ಕೊಂಡಿದ್ದಾರೆ. ನಂತರ ಆತನ ಮೊಬೈಲ್ನಿಂದ ವಹಿವಾಟಿನ ವಿವರಗಳಿಗೆ ಸಂಬಂಧಿಸಿದ SMS ಮತ್ತು ಸಂದೇಶಗಳನ್ನು ಡಿಲೀಟ್ ಮಾಡಿದ್ದಾರೆ.
ಈ ವಂಚನೆ ಆತನಿಗೆ ತಕ್ಷಣವೇ ಗೊತ್ತಾಗಿಲ್ಲ. ಕೆಲ ಸಮಯದ ನಂತರ ಆತನ ಅಕೌಂಟ್ನಿಂದ ಹಣ ವಂಚನೆಯಾಗಿದ್ದು ಗೊತ್ತಾಗಿದ್ದು, ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ತನಿಖೆ ನಡೆಸಿದಾಗ ಈತನ ಮೊಬೈಲ್ಗೆ ಅಮೆರಿಕದಿಂದ ಮತ್ತು ಆಸ್ಟ್ರೇಲಿಯಾದಿಂದ ಎಸ್‌ಎಂಎಸ್ ಬಂದಿರುವುದನ್ನು ಪತ್ತೆ ಮಾಡಿದ್ದಾರೆ.