ನವದೆಹಲಿ: ರಾಷ್ಟ್ರ ರಾಜಧಾನಿ ನಿನ್ನೆ ನಿಗಿ ನಿಗಿ ಕೆಂಡವಾಗಿತ್ತು. ಭಾನುವಾರ ಬಿಸಿ ದಿನವಾಗಿ ಪರಿಣಮಿಸಿತು. ಸಫ್ದರ್‌ಜಂಗ್ ಮೇಲ್ವಿಚಾರಣಾ ಕೇಂದ್ರದಲ್ಲಿ ಗರಿಷ್ಠ ತಾಪಮಾನ 43.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ನಗರದಲ್ಲಿ ಶೇಕಡಾ 41 ರಷ್ಟು ಆರ್ದ್ರತೆ ಇತ್ತು ಮತ್ತು ಹವಾಮಾನ ಸಾಮಾನ್ಯವಾಗಿತ್ತು ಎಂದು ಹೇಳಿದೆ.
ನವದೆಹಲಿಯಲ್ಲಿ ಭಾನುವಾರ ಬೆಳಗ್ಗೆ 5.23 ಕ್ಕೆ ಸೂರ್ಯೋದಯ ಮತ್ತು 7.20 ಕ್ಕೆ ಸೂರ್ಯಾಸ್ತವಾಗಿದೆ. ದೆಹಲಿಯ ಇತರ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಅಯನಗರ್ 44.4, ಲೋಧಿ ರಸ್ತೆ 44, ಪಾಲಂ 44.1, ರಿಡ್ಜ್ 45.8, ಜಾಫರ್‌ಪುರ 44.6, ಮುಂಗೇಶ್‌ಪುರ 46.2, ನಜಾಫ್‌ಗಡ್ 46.4, ಪಿತಾಂಪುರ 45.8 ಮತ್ತು ಸಲ್ವಾನ್ ಪಬ್ಲಿಕ್ ಸ್ಕೂಲ್ ಬಳಿ 43.2 ಡಿಗ್ರಿ ಸೆಲ್ಸಿಯಸ್ ತಾಪಮಾನ ಇತ್ತು.