ಹೋಶಿಯಾರ್‌ಪುರ: ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ನಸ್ರಾಲಾ ಬಳಿಯ ಆಮ್ಲಜನಕ ಘಟಕದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದು, ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರ್ಖಾನೆ ಆವರಣದಲ್ಲಿ ದ್ರವರೂಪದ ಸಾರಜನಕ ಅನಿಲ ಸಿಲಿಂಡರ್ ಅನ್ನು ಭರ್ತಿ ಮಾಡುವಾಗ ಸ್ಫೋಟಗೊಂಡಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟ: ಓರ್ವ ಸಾವು, ಇಬ್ಬರಿಗೆ ಗಾಯ - ಆಮ್ಲಜನಕ ಘಟಕದಲ್ಲಿ ಶನಿವಾರ ಸಂಭವಿಸಿದ ಸ್ಫೋಟ
ಆಮ್ಲಜನಕ ಘಟಕದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದು, ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರ್ಖಾನೆ ಆವರಣದಲ್ಲಿ ದ್ರವರೂಪದ ಸಾರಜನಕ ಅನಿಲ ಸಿಲಿಂಡರ್ ಅನ್ನು ಭರ್ತಿ ಮಾಡುವಾಗ ಸ್ಫೋಟಗೊಂಡಿದೆ.
Hoshiarpur: One killed, at least two injured in gas cylinder blast
ಘಟನೆಯ ನಂತರ ನಸ್ರಾಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಜೆಕೆ ಎಂಟರ್‌ಪ್ರೈಸಸ್ ಎಂದು ಗುರುತಿಸಲಾದ ಕಾರ್ಖಾನೆಗೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮೃತಪಟ್ಟವ ವಲಸೆ ಕಾರ್ಮಿಕ ಎಂದು ಗುರುತಿಸಲಾಗಿದೆ. ಘಟನೆಯ ತನಿಖೆ ನಡೆಸಲು ಚಂಡೀಗಢದಿಂದ ವಿಧಿವಿಜ್ಞಾನ ತಂಡವನ್ನು ಕರೆಸಲಾಗಿದೆ ಎಂದು ಹೋಶಿಯಾರ್‌ಪುರ ಎಸ್‌ಪಿ (ತನಿಖೆ) ಮನ್‌ಪ್ರೀತ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.
ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.