ಕರ್ನಾಟಕ

karnataka

ETV Bharat / bharat

ಭೀಕರ ರಸ್ತೆ ಅಪಘಾತ: REET ಪರೀಕ್ಷೆಗೆ ತೆರಳುತ್ತಿದ್ದ ಐವರು ವಿದ್ಯಾರ್ಥಿಗಳು ಸೇರಿ 6 ಜನ ದುರ್ಮರಣ - ರಾಜಸ್ಥಾನ ಅಪಘಾತ

ರೀಟ್ ಪರೀಕ್ಷೆ(REET Exam) ಬರೆಯಲು ತೆರಳುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಸೇರಿ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಜಸ್ಥಾನದಲ್ಲಿ ಈ ದುರ್ಘಟನೆ ಸಂಭವಿಸಿದೆ.

Horrible Accident
Horrible Accident

By

Published : Sep 25, 2021, 9:34 AM IST

ಜೈಪುರ(ರಾಜಸ್ಥಾನ): ರೀಟ್ ಪರೀಕ್ಷೆ(REET Exam) ಬರೆಯಲು ತೆರಳುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿ ವ್ಯಾನ್ ಚಾಲಕ ಹಾಗೂ ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಕ್ಸು ಹೆದ್ದಾರಿಯಲ್ಲಿ ನಡೆದಿದೆ. ದುರಂತದಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬರಾನ್​ನಿಂದ ರೀಟ್​ ಪರೀಕ್ಷೆ ಬರೆಯಲು 11 ಪರೀಕ್ಷಾರ್ಥಿಗಳು ವ್ಯಾನ್​ನಲ್ಲಿ ತೆರಳುತ್ತಿದ್ದ ವೇಳೆ, ಚಕ್ಸುವಿನ ರಾಷ್ಟ್ರೀಯ ಹೆದ್ದಾರಿ 12 ರ ನಿಮೋಡಿಯಾ ಬಳಿ ದುರಂತ ಸಂಭವಿಸಿದೆ. ವ್ಯಾನ್ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ಮರ್ಯಾದಾ ಹತ್ಯೆ.. 18 ವರ್ಷದ ನಂತ್ರ ಕೋರ್ಟ್​ನಿಂದ ಐತಿಹಾಸಿಕ ತೀರ್ಪು: 12 ಮಂದಿಗೆ ಜೀವಾವಧಿ ಶಿಕ್ಷೆ

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಕ್ಸು ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details