ನವದೆಹಲಿ/ಗಾಜಿಯಾಬಾದ್:ನಿಯಂತ್ರಣ ಕಳೆದುಕೊಂಡ ಆ್ಯಂಬುಲೆನ್ಸ್ ಕೆಲ ವಾಹನಗಳಿಗೆ ಡಿಕ್ಕಿ ಹೊಡೆದು ಓರ್ವ ಮಹಿಳೆ ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಮಗು ಸೇರಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಗಾಜಿಯಾಬಾದ್ನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಾಪ್ ವಿಹಾರ್ ಪ್ರದೇಶದಲ್ಲಿ ದುರ್ಘಟನೆ ನಡೆದಿದೆ.
ಭೀಕರ ರಸ್ತೆ ಅಪಘಾತ: ಮಹಿಳೆ ಸೇರಿದಂತೆ ಮೂವರು ಸಾವು, ಇಬ್ಬರಿಗೆ ಗಾಯ - ಈಟಿವಿ ಭಾರತ ಕರ್ನಾಟಕ
ಬೆಳ್ಳಂಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಸೇರಿದಂತೆ ಮೂವರು ದುರ್ಮರಣಕ್ಕೀಡಾಗಿರುವ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ.
Etv Bharat
ಇದನ್ನೂ ಓದಿ:80 ವರ್ಷ ಹಳೆಯ ಎರಡಂತಸ್ತಿನ ಕಟ್ಟಡ ಕುಸಿತ: ಮಗು ಸೇರಿ ಮೂವರ ಸಾವು
ಪೊಲೀಸರು ಈಗಾಗಲೇ ಆ್ಯಂಬುಲೆನ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಚಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆ್ಯಂಬುಲೆನ್ಸ್ ಅನ್ನು ಅತಿ ವೇಗವಾಗಿ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗ್ತಿದೆ.