ಕರ್ನಾಟಕ

karnataka

ETV Bharat / bharat

ಔರಂಗಾಬಾದ್​​ನಲ್ಲಿ ರಸ್ತೆ ಅಪಘಾತ.. ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ! - Horrible road accident in MH

Road accident in Aurangabad: ದ್ವಿಚಕ್ರ ವಾಹನ ಹಾಗೂ ಕಾರಿನ ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Road accident in Aurangabad
Road accident in Aurangabad

By

Published : Dec 30, 2021, 3:05 PM IST

Updated : Dec 30, 2021, 7:37 PM IST

ಔರಂಗಾಬಾದ್​(ಮಹಾರಾಷ್ಟ್ರ):ವೇಗವಾಗಿ ಬರುತ್ತಿದ್ದ ಕಾರ್​​ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್​​ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಭೀಕರ ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಔರಂಗಾಬಾದ್​​ನಲ್ಲಿ ಭೀಕರ ರಸ್ತೆ ಅಪಘಾತ

ಶೇಕ್ತಾ ಗ್ರಾಮದ ಜಲ್ನಾ ರಸ್ತೆಯಲ್ಲಿ ಈ ಅವಘಡ ನಡೆದಿದ್ದು, ಅದೃಷ್ಟವಶಾತ್​​ ಬೈಕ್​​ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶೇಕ್ತಾದಿಂದ ಔರಂಗಾಬಾದ್​​ಗೆ ದ್ವಿಚಕ್ರ ವಾಹನ ತೆರಳುತ್ತಿತ್ತು. ಇದರಲ್ಲಿ ಪತಿ, ಪತ್ನಿ ಹಾಗೂ ಮಗು ಸಹ ಇತ್ತು.

ಇದನ್ನೂ ಓದಿರಿ:ಒಮಿಕ್ರಾನ್ ವಿರುದ್ಧ ಕೋವಿಡ್​​ ಲಸಿಕೆ ಪರಿಣಾಮಕಾರಿ: WHO ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್

ಔರಂಗಾಬಾದ್​​​ನಿಂದ ಜಲ್ನಾ ಕಡೆಗೆ ತೆರಳುತ್ತಿದ್ದ ಕಾರ್​ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ ಬೈಕ್​​ ಸುಮಾರು 10ರಿಂದ 15 ಅಡಿ ಮುಂದೆ ಹೋಗಿ ಬಿದ್ದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್​ ಠಾಣೆಯಲ್ಲಿ ಯಾವುದೇ ರೀತಿಯ ಪ್ರಕರಣ ದಾಖಲಾಗಿಲ್ಲ ಎನ್ನಲಾಗುತ್ತಿದೆ.

Last Updated : Dec 30, 2021, 7:37 PM IST

ABOUT THE AUTHOR

...view details