ಮೇಷ: ಇಂದು ನೀವು ಸೂಕ್ಷ್ಮ ಕುಸುರಿ ಮತ್ತು ಸೌಂದರ್ಯಕ್ಕೆ ಗಮನ ನೀಡುತ್ತೀರಿ. ಸುಂದರ ವಸ್ತುಗಳ ಕುರಿತಾದ ಹೊಸ ಉದ್ಯಮ ಪ್ರಾರಂಭಿಸಲು ಬಯಸುತ್ತೀರಿ. ಆದರೆ ನಿರ್ಧಾರ ಕೈಗೊಳ್ಳುವುದು ಕಷ್ಟದ ಕೆಲಸ. ಆಯ್ಕೆಗಳನ್ನು ಆವಿಷ್ಕರಿಸಿ ಮತ್ತು ಮುಕ್ತ ಮನಸ್ಸಿನಿಂದ ಇರಲು ಪ್ರಯತ್ನಿಸಿ.
ವೃಷಭ: ಇಂದು ನಿಮ್ಮೊಂದಿಗೆ ನೀವು ಕೊಂಚ ಗುಣಮಟ್ಟದ ಸಮಯ ಕಳೆಯಲು ಅತ್ಯಂತ ಸೂಕ್ತವಾದ ದಿನವಾಗಿದೆ. ಹಿಂದೆಂದೂ ಇಲ್ಲದಂತೆ ನಿರಾಳವಾಗಿ ಮತ್ತು ನವೋತ್ಸಾಹ ತುಂಬಿಕೊಳ್ಳಿ. ಈ ದಿನದಲ್ಲಿ ನಿಮ್ಮ ಮಿತ್ರರು ಹಾಗೂ ಕುಟುಂಬದೊಂದಿಗೆ ಭೋಜನಕೂಟ ಹಾಗೂ ಮನರಂಜನೆ ಪಡೆಯುವ ಸಾಧ್ಯತೆ ಇದೆ. ನೀವು ಇಂದು ಖಾರ, ಸವಿಯಾದ ಮತ್ತು ಸ್ವಾದಿಷ್ಟ ತಿನಿಸನ್ನು ಬಯಸುತ್ತೀರಿ.
ಮಿಥುನ: ಇಂದು ನೀವು ಸಂಪೂರ್ಣ ಚೈತನ್ಯ ಮತ್ತು ಅತ್ಯಂತ ಉತ್ಸಾಹದಲ್ಲಿರುತ್ತೀರಿ. ನೀವು ವಿಷಯಗಳನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡುತ್ತೀರಿ, ಅದು ನಿಮ್ಮನ್ನು ಯಶಸ್ಸಿನತ್ತ ಕರೆದುಕೊಂಡು ಹೋಗಲು ನೆರವಾಗುತ್ತದೆ. ನೀವು ಮುಕ್ತವಾಗಿ ಕಾರ್ಯ ನಿರ್ವಹಿಸಲು ಶಕ್ತರಾಗುತ್ತೀರಿ, ಆದ್ದರಿಂದ ನಿಮಗೆ ಇಷ್ಟವಾಗುವ ವಿಷಯಗಳನ್ನು ತೆಗೆದುಕೊಳ್ಳುತ್ತೀರಿ. ನಿಮಗೆ ಅತ್ಯಂತ ಒತ್ತಡವಿರಬಹುದು, ಆದರೆ ಅದು ಶಾಂತಿಯುತ ಮತ್ತು ಪುರಸ್ಕಾರಯುತ ಫಲಿತಾಂಶಗಳನ್ನು ನೀಡುತ್ತದೆ.
ಕರ್ಕಾಟಕ: ನಿಮ್ಮ ಮನಸ್ಥಿತಿ ಅಥವಾ ಮನಸ್ಸು ಅವಿಶ್ರಾಂತ ಮತ್ತು ಕೆರಳಿಸುವಂತಿರುತ್ತದೆ. ಪ್ರತಿಕೂಲ ಪರಿಸ್ಥಿತಿಗಳು ನಿಮ್ಮ ಮನೆ ಬಾಗಿಲು ತಟ್ಟುತ್ತವೆ. ಆದ್ದರಿಂದ ತಾಳ್ಮೆ ಇರಲಿ ಮತ್ತು ಅವುಗಳನ್ನು ಧೈರ್ಯದಿಂದ ಎದುರಿಸಿರಿ. ಈ ಧೈರ್ಯ ನಿಮ್ಮನ್ನು ಅಗೋಚರವಾದ ಯಶಸ್ಸಿನತ್ತ ಮುನ್ನಡೆಸುತ್ತದೆ. ಮುಂಗೋಪದ ಮನೋಭಾವ ಬಿಟ್ಟುಬಿಡಿ.
ಸಿಂಹ: ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ನೀವು ಕೆಲಸದಲ್ಲಿ ಬಹಳ ಮಹತ್ವದ ನಿರ್ಧಾರಗಳನ್ನು ದೃಢವಾಗಿ ತೆಗೆದುಕೊಳ್ಳುತ್ತೀರಿ. ಇಂದು ಕೆಲಸ ಸುಸೂತ್ರವಾಗುವುದನ್ನು ಕಾಣುತ್ತೀರಿ ಮತ್ತು ಯಶಸ್ಸು ನಿಮ್ಮನ್ನು ಅನುಸರಿಸುತ್ತದೆ.
ಕನ್ಯಾ: ವೈಯಕ್ತಿಕ ವ್ಯವಹಾರಗಳು ವೃತ್ತಿಪರತೆಯನ್ನು ಮಸುಕಾಗಿಸುತ್ತವೆ. ಇಂದು ನೀವು ನಿಮ್ಮ ಸಮಸ್ಯೆಗಳನ್ನು ಎದುರಿಸಲು ಮುಂದಾಗುತ್ತೀರಾ. ಭಾವನಾತ್ಮಕವಾಗಿ ಮುಖ್ಯವಾಗಿ ಸಂಜೆಯ ವೇಳೆ ಗೊಂದಲಗಳಿಗೆ ಸಿಲುಕಿಕೊಳ್ಳಬೇಡಿ.