ಕರ್ನಾಟಕ

karnataka

ETV Bharat / bharat

ಇಂದಿನ ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿ

ಇಂದಿನ ನಿಮ್ಮ ರಾಶಿ ಫಲಾಫಲ ಹೀಗಿದೆ ನೋಡಿ..

Horoscope
ರಾಶಿ ಭವಿಷ್ಯ

By

Published : Jun 3, 2021, 5:59 AM IST

ಮೇಷ:ಇಂದು ನೀವು ಯಶಸ್ಸು ಪಡೆಯುತ್ತೀರಿ ಮತ್ತು ಅದನ್ನು ಯಾರ ಬೆಂಬಲವಿಲ್ಲದೆ ನಿಮ್ಮದೇ ಪರಿಶ್ರಮದಿಂದ ಮಾಡುತ್ತೀರಿ. ನೀವು ವಿಜ್ಞಾನ ಅಥವಾ ಕಲಾ ವಿದ್ಯಾರ್ಥಿಯಾಗಿರಬಹುದು ಆದರೆ ವಿಷಯದ ಆಳ ಜ್ಞಾನದಿಂದ ಮಾತ್ರ ಶ್ರೇಷ್ಠರಾಗುತ್ತೀರಿ.

ವೃಷಭ:ನೀವು ಇತರರನ್ನು ಮೆಚ್ಚಿಸಲು ಅಥವಾ ಪ್ರಭಾವ ಬೀರಲು ಕಷ್ಟ ಎಂದು ಕಾಣುತ್ತೀರಿ. ನೀವು ಒಳ್ಳೆಯದನ್ನು ಮಾಡಲು ಬಯಸಿದ್ದರೂ ನೀವು ಪ್ರಾರಂಭಿಕ ಹಿನ್ನಡೆಗಳನ್ನು ಅನುಭವಿಸಬಹುದು. ಆದರೆ ನೀವು ನಂತರ ಯಶಸ್ವಿಯಾಗುತ್ತೀರಿ.

ಮಿಥುನ:ಧಾರ್ಮಿಕ, ಸಾಂಸ್ಕೃತಿಕ ಮತ್ತು ಬೌದ್ಧಿಕ ಅನ್ವೇಷಣೆಗಳು ನಿಮ್ಮನ್ನು ಇಡೀ ದಿನ ಒತ್ತಡದಲ್ಲಿ ಇರಿಸುತ್ತವೆ. ನೀವು ಕಡ್ಡಾಯವಾಗಿ ಕೆಲ ಸಾಮಾಜಿಕ ಕಾರ್ಯಕ್ರಮಗಳಿಗೆ ಭೇಟಿ ನೀಡಬೇಕು. ನೀವು ಸೇವೆ ಮತ್ತು ದತ್ತಿ ಕೆಲಸದಲ್ಲಿ ವೆಚ್ಚಗಳನ್ನು ಎದುರಿಸುತ್ತೀರಿ. ವ್ಯಾಪಾರ ವ್ಯವಹಾರಗಳಿಗೆ ಇದು ಒಳ್ಳೆಯ ಸಮಯ.

ಕರ್ಕಾಟಕ:ನೀವು ಕೆಲ ಸಾಮಾನ್ಯ ಸನ್ನಿವೇಶಗಳನ್ನು ಅಸಾಮಾನ್ಯ ರೀತಿಯಲ್ಲಿ ನಿಭಾಯಿಸಲು ಸಜ್ಜಾಗಬೇಕು. ನೀವು ಈ ಮಧ್ಯಾಹ್ನ ಸಾರ್ವಜನಿಕ ಮನಃಶಾಸ್ತ್ರದಲ್ಲಿ ಹೊಸ ಪಾಠಗಳನ್ನು ಕಲಿಯಬಹುದು. ಆದರೆ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ಪೂರ್ವಾಗ್ರಹಗಳಿಲ್ಲದೆ ಸರಿತಪ್ಪುಗಳನ್ನುಅಳೆಯಿರಿ.

ಸಿಂಹ:ನೀವು ಇಂದು ನಿಮ್ಮ ಕೋಪವನ್ನು ನಿಯಂತ್ರಿಸಬೇಕು. ನಿಮ್ಮ ಮೂಡ್ ಏರಿಳಿತ ಮುಖ್ಯವಾಗಿ ಬೆಳಿಗ್ಗೆ ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಇಂದು ನೀವು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ವ್ಯಸ್ತರಾಗಿರುತ್ತೀರಿ ಮತ್ತು ಇದು ನಿಮ್ಮ ಒತ್ತಡಗಳಿಗೆ ಸೇರ್ಪಡೆಯಾಗುತ್ತದೆ. ಆದಾಗ್ಯೂ, ಒಂದು ಅಥವಾ ಎರಡು ದಿನಗಳಲ್ಲಿ ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುತ್ತೀರಿ.

ಕನ್ಯಾ:ಕ್ಷುಲ್ಲಕ ವಿಷಯಗಳಿಗೆ ಸಿಡಿಯಬೇಡಿ, ಅದು ಆತ್ಮೀಯ ಬಾಂಧವ್ಯಗಳಿಗೆ ಧಕ್ಕೆಯುಂಟು ಮಾಡುತ್ತದೆ. ನ್ಯಾಯಾಲಯದ ಹೊರಗಿನ ಇತ್ಯರ್ಥ ಎಲ್ಲ ಕಾನೂನು ಸಮಸ್ಯೆಗಳನ್ನು ನಿವಾರಿಸುತ್ತದೆ. ಸಂಜೆಗಳಲ್ಲಿ ಮುಕ್ತವಾಗಿ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿರಿ ಮತ್ತು ಆನಂದಿಸಿರಿ.

ತುಲಾ: ನೀವು ದೈನಂದಿನ ಜೀವನದ ಏಕತಾನತೆಯಿಂದ ಹೊರಬರಲು ಬಯಸುತ್ತೀರಿ ಮತ್ತು ನಿಮ್ಮ ಕೆಲಸದಿಂದ ಬಿಡುವು ಪಡೆದು ಸುತ್ತಾಡಲು ಹೋಗುತ್ತೀರಿ. ನೀವು ಕೈಗೊಳ್ಳುವ ಈ ಪ್ರವಾಸ, ನಿಮಗೆ ಅನುಕೂಲಕರವಾಗಲಿದೆ ಮತ್ತು ನಿಮ್ಮ ಜ್ಞಾನ ಮತ್ತು ಅನುಭವ ಹೆಚ್ಚಿಸಲಿದೆ.

ವೃಶ್ಚಿಕ: ಆಗಾಗ್ಗೆ, ನೀವು ಜೀವನದ ಐಷಾರಾಮಗಳನ್ನು ಆನಂದಿಸುವುದು ಮತ್ತು ನಿಮ್ಮನ್ನು ನೀವು ಸಂತೋಷಗೊಳಿಸಿಕೊಳ್ಳುವುದು ಉತ್ತಮ. ನಿಮ್ಮ ಸಂಗಾತಿಯೊಂದಿಗೆ ಇದ್ದರೆ, ಅದು ನಿಮ್ಮ ಇಡೀ ಅನುಭವಕ್ಕೆ ಪ್ರಣಯದ ಸ್ಪರ್ಶ ನೀಡುತ್ತದೆ. ಕೆಲಸದ ವಿಷಯಕ್ಕೆ ಬಂದರೆ, ಜನರು ನಿಮ್ಮನ್ನು ಕಂಪನಿಯ ಸಂಪತ್ತನ್ನಾಗಿ ನೋಡುತ್ತಾರೆ.

ಧನು:ಇಂದು ನಿಮಗೆ ಗೋಲ್ಡ್ ಫಿಂಗರ್ ಎಂಬ ಹೆಸರಿಡಬಹುದು. ನೀವು ಏನೇ ಮಾಡಲಿ ಫಲಿತಾಂಶ ನೀವು ನಿರೀಕ್ಷಿದ್ದಕ್ಕಿಂತ ಹೆಚ್ಚಾಗಿರುತ್ತದೆ. ನೀವು ಇತರರಿಗೆ ಅವರ ಕೊಡುಗೆಗೆ ಪ್ರಶಂಸೆ ಮಾಡಲು ಹಿಂಜರಿಯಬಾರದು. ಪ್ರೀತಿಪಾತ್ರರು ನಿಮ್ಮ ಗಮನ ಕೇಂದ್ರಬಿಂದುವಾಗುತ್ತಾರೆ.

ಮಕರ:ಯಶಸ್ವಿ ಜೀವನಕ್ಕೆ ಸಕಾರಾತ್ಮಕ ಪ್ರವೃತ್ತಿ, ಪರಿಶ್ರಮ, ಸಮಯ ನಿರ್ವಹಣೆ ಅಥವಾ ಸದೃಢ ಹಾಗೂ ಬೆಂಬಲದ ಹಿತೈಷಿಗಳು ಎಲ್ಲವೂ ಅಗತ್ಯ. ಆದರೆ ಸುಲಭವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು ನಿಮ್ಮ ಪ್ರೀತಿಪಾತ್ರರಿಗೆ ನೀವು ಎಷ್ಟು ಮುಖ್ಯ ಎನ್ನುವುದನ್ನು ತೋರುತ್ತದೆ.

ಕುಂಭ:ನೀವು ಭ್ರಮೆಯಲ್ಲಿ ಬದುಕುತ್ತೀರಿ ಮತ್ತು ವಾಸ್ತವದಿಂದ ದೂರ ಸರಿಯುತ್ತೀರಿ. ಅವಾಸ್ತವಿಕ ಇಚ್ಛೆಗಳನ್ನು ಮಾಡಬೇಡಿ. ಇಲ್ಲದಿದ್ದರೆ ನೀವು ವಿಷಯಗಳು ಹೇಗಿವೆ ಎಂದು ತಿಳಿದಾಗ ಅತ್ಯಂತ ನಿರಾಸೆಗೊಳ್ಳುತ್ತೀರಿ. ನಿಮ್ಮಲ್ಲಿ ಏನಿದೆಯೋ ಅದರ ಕುರಿತು ಸಂತೋಷವಾಗಿರಿ. ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮ ಪ್ರಯತ್ನಗಳಿಗೆ ಬೆಂಬಲ ನೀಡುವುದರಿಂದ ನೀವು ಸರಾಗವಾಗಿ ಮುನ್ನಡೆಯುತ್ತೀರಿ.

ಮೀನ:ನೀವು ಸಣ್ಣ ಸಂಘರ್ಷಗಳನ್ನು ಇಡೀ ದಿನ ಪರಿಹರಿಸಬೇಕಾಗುತ್ತದೆ. ಅವು ಪರಿಹಾರವಾದ ನಂತರವೂ ಈ ಸಂಘರ್ಷಗಳಿಂದ ಹೊರಬರಲು ನಿಮಗೆ ಸಮಯ ಬೇಕಾಗುತ್ತದೆ. ಕೆಲಸದಲ್ಲಿ ಪ್ರಗತಿ ಸಾಧಿಸಬೇಕಾದರೆ ನಿಮ್ಮ ಮೂಡ್ ಬದಲಾವಣೆಗಳ ಕುರಿತು ನೀವು ಎಚ್ಚರ ವಹಿಸಬೇಕು.

ABOUT THE AUTHOR

...view details