ಮೇಷ: ನೀವು ಇಂದು ನಿಮ್ಮ ಮಕ್ಕಳ ಬೇಡಿಕೆಗೆ ಗಮನ ನೀಡುತ್ತೀರಿ. ಇಂತಹ ಸಮಯದಲ್ಲಿ ನಿಮ್ಮ ಶ್ರಮ ಅತ್ಯಂತ ಕಠಿಣವಾಗಿರುತ್ತದೆ. ನೀವು ಸುದೀರ್ಘ ಕಾಲದಿಂದ ಮುಂದೂಡುತ್ತಿದ್ದ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ವೈದ್ಯಕೀಯ ಕ್ಷೇತ್ರ ಹಾಗೂ ಸಾರ್ವಜನಿಕ ವಲಯದಲ್ಲಿ ಇರುವವರಿಗೆ ಇದು ಒಳ್ಳೆಯ ದಿನ.
ವೃಷಭ: ಇಂದು, ನೀವು ಸಾಧ್ಯವಿರುವಷ್ಟೂ ಸೃಜನಶೀಲ ಮತ್ತು ಸ್ಪರ್ಧಾತ್ಮಕವಾಗಿರುತ್ತೀರಿ. ನಿಮ್ಮ ಕೆಲಸದ ಶೈಲಿ, ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳಲ್ಲಿ ವಿಸ್ಮಯ ಮತ್ತು ಅಚ್ಚರಿಗೊಳಿಸುತ್ತದೆ. ನಿಮ್ಮ ಕೈ ಕೆಳಗಿನವರು ಅತ್ಯಂತ ಪ್ರಭಾವಿತರು ಮತ್ತು ಪ್ರೇರೇಪಣೆ ಹೊಂದುತ್ತಾರೆ.
ಮಿಥುನ: ನೀವು ಇಂದು ಬುದ್ಧಿಗಿಂತ ಹೃದಯದ ಮಾತು ಕೇಳುತ್ತೀರಿ, ಭಾವನೆಗಳ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತೀರಿ. ಇದರ ಅರ್ಥ ನೀವು ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ವ್ಯತ್ಯಾಸ ಕಂಡುಕೊಳ್ಳಲು ಅಶಕ್ತರಾಗುತ್ತೀರಿ. ಆದರೆ, ಸಂಜೆಯ ವೇಳೆಗೆ ಸಂಗತಿಗಳು ಸುಧಾರಿಸುತ್ತವೆ.
ಕರ್ಕಾಟಕ: ಈ ದಿನವನ್ನು ನೀವು ಉಜ್ವಲ ಭವಿಷ್ಯಕ್ಕಾಗಿ ಖಚಿತವಾದ ಯೋಜನೆಯಿಂದ ಪ್ರಾರಂಭಿಸುತ್ತೀರಿ. ನೀವು ಆಲೋಚನಯುಕ್ತವಾಗಿ ರೂಪಿಸಿದ ಕಾರ್ಯತಂತ್ರಗಳನ್ನು ದೃಢವಾಗಿ ಅನುಷ್ಠಾನಗೊಳಿಸುತ್ತೀರಿ. ಅಂತಹ ವಿಧಾನಾತ್ಮಕ ನಿರ್ಧಾರಗಳು ಭವಿಷ್ಯದಲ್ಲಿ ನಿಮಗೆ ಸಾಕಷ್ಟು ಸಮಯ ಉಳಿಸುತ್ತವೆ. ಇಂದು ನೀವು ಪ್ರತಿ ಪ್ರಯತ್ನದಲ್ಲೂ ಯಶಸ್ವಿಯಾಗುತ್ತೀರಿ.
ಸಿಂಹ: ಇಂದು ನೀವು ನಿಮ್ಮ ಸಾಮರ್ಥ್ಯ ಮೀರಿ ಹೊಸ ಯೋಜನೆಗಳನ್ನು ತೆಗೆದುಕೊಳ್ಳುತ್ತೀರಿ. ನಿಮ್ಮ ಎಲ್ಲ ಗುರಿಗಳನ್ನು ಇಂದು ಯಶಸ್ವಿಯಾಗಿ ಪೂರೈಸುತ್ತೀರಿ. ನಿಮ್ಮ ವೈಯಕ್ತಿಕ ಬಾಂಧವ್ಯಗಳಲ್ಲಿ ನೀವು ಕೊಂಚ ಅಸ್ಥಿರತೆ ಎದುರಿಸಿದರೂ ಎಲ್ಲ ಸಮಸ್ಯೆಗಳನ್ನೂ ಯಶಸ್ವಿಯಾಗಿ ಪರಿಹರಿಸಿಕೊಳ್ಳಲು ಸಮರ್ಥರಾಗುತ್ತೀರಿ.
ಕನ್ಯಾ: ನೀವು ಇಂದು ಕೌಟುಂಬಿಕ ವಿಷಯಗಳ ಪ್ರಾಮುಖ್ಯತೆಯನ್ನು ಕಂಡುಕೊಳ್ಳುತ್ತೀರಿ. ಸಂಧಾನ ಮಾತುಕತೆಗಳಲ್ಲಿ ನಿಮಗೆ ಮಹತ್ತರ ಕೌಶಲ್ಯಗಳಿವೆ ಮತ್ತು ಅದನ್ನು ನೀವು ವಿವಾದಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಬಳಸುತ್ತೀರ. ನೀವು ಶಾಂತಿ ಮತ್ತು ಸಮಚಿತ್ತತೆಯಿಂದ ಇರುವ ಮೂಲಕ ಜೀವನದ ಪಾಠಗಳನ್ನು ಕಲಿಯುತ್ತೀರಿ.